ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ?

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.24. ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ಇದೆ. ಬೆಂಗಳೂರಿನಿಂದ ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣಕ್ಕೆ ಹೊಸದಾಗಿ ರೈಲು ಆರಂಭಿಸುವ ಬಗ್ಗೆ ಕೇಂದ್ರ ರೈಲ್ವೇ ಸಚಿವಾಲಯ ಚಿಂತನೆ ನಡೆಸುತ್ತಿದೆ. ಸಿಕಂದರಾಬಾದ್‌ನಿಂದ ತಿರುಪತಿ, ಪುಣೆಗೂ ಹೊಸ ರೈಲಿನ ಸೇವೆ ಸಿಗಲಿದೆ.

ಎಪ್ರಿಲ್‌-ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ, ಈ ವರ್ಷವೇ ತೆಲಂಗಾಣ ವಿಧಾನಸಭೆ ಚುನಾವಣೆ ಇರುವು ದರಿಂದ ಕೇಂದ್ರದ ಈ ನಿರ್ಧಾರ ಮಹತ್ವ ಪಡೆದಿದೆ. 2024ರ ಲೋಕಸಭೆ ಚುನಾವಣೆ ವೇಳೆ ದ. ಭಾರತದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ಈ ಘೋಷಣೆ ಮಾಡಿದೆ ಎನ್ನಲಾಗಿದೆ.

Also Read  ಮಂಗಳೂರು: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

 

error: Content is protected !!
Scroll to Top