ಅಪ್ರಾಪ್ತೆ ಕಾರಣಕ್ಕೆ ಮದುವೆ ರದ್ದಾಗದು ➤ ಕರ್ನಾಟಕ ಹೈಕೋರ್ಟ್

(ನ್ಯೂಸ್ ಕಡಬ)newskadaba.com  ಬೆಂಗಳೂರು, 24. ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ಹಿಂದೂ ವಿವಾಹ ಕಾಯಿದೆಯನ್ವಯ ಜರುಗಿರುವ ವಿವಾಹವನ್ನು ರದ್ದುಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ತೀರ್ಪು ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ವಿವಾಹದ ಸಂದರ್ಭದಲ್ಲಿ ಯುವತಿ ಅಪ್ರಾಪ್ತಳಾಗಿದ್ದಳೆಂಬ ಕಾರಣಕ್ಕೆ ಮದುವೆಯನ್ನು ರದ್ದುಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹತ್ವದ ಆದೇಶ ನೀಡಿದೆ.

Also Read  ABVP ಕಾರ್ಯಕರ್ತರಿಗೆ ಸಿಂಹಸ್ವಪ್ನವಾದ ಎಸ್ಪಿ ಅಣ್ಣಾಮಲೈ

 

 

error: Content is protected !!
Scroll to Top