ಜನಪ್ರಿಯತೆಗಾಗಿ ದ್ವೀಪಗಳ ಮರುನಾಮಕರಣ..! ➤ ಮಮತಾ ಬ್ಯಾನರ್ಜಿ

(ನ್ಯೂಸ್ ಕಡಬ)newskadaba.com ಕೋಲ್ಕತ್ತ, ಜ.24. ದ್ವೀಪಗಳಿಗೆ ಮರುನಾಮಕರಣವು ಜನಪ್ರಿಯತೆ ‍ಪಡೆದು ಕೊಳ್ಳುವ ಹುನ್ನಾರ ಮಾತ್ರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳಿಗೆ ಶಹೀದ್‌ ಮತ್ತು ಸ್ವರಾಜ್‌ ದ್ವೀಪಗಳು ಎಂದು 1943 ರಲ್ಲಿಯೇ ನೇತಾಜಿ ಅವರು ಹೆಸರು ಇರಿಸಿದ್ದರು ಎಂದು ಮಮತಾ ಹೇಳಿದ್ದಾರೆ.

ಮೋದಿ ಅವರು 21 ದ್ವೀಪಗಳ ಹೆಸರು ಬದಲಾಯಿಸಿದ್ದಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ನೀಲ್‌ ಮತ್ತು ಹ್ಯಾವ್‌ಲಾಕ್‌ ದ್ವೀಪಗಳ ಹೆಸರನ್ನು 2018ರಲ್ಲಿಯೇ ಶಹೀದ್‌ ದ್ವೀಪ ಮತ್ತು ಸ್ವರಾಜ್‌ ದ್ವೀಪ ಎಂದು ಬದಲಿಸಲಾಗಿದೆ. ‘ದೇಶದ ಭವಿಷ್ಯಕ್ಕಾಗಿ ನೇತಾಜಿ ಅವರು ಯೋಜನಾ ಆಯೋಗವನ್ನು ರೂಪಿಸಿದ್ದರು. ಇಂದು ನಮ್ಮ ದುರದೃಷ್ಟ. ಯಾವ ಯೋಜನೆಯೂ ಇಲ್ಲದಂತಾಗಿದೆ. ಯೋಜನಾ ಆಯೋಗವನ್ನು ರದ್ದುಪಡಿಸಲಾಗಿದೆ. ಏಕೆ ಎಂಬುದನ್ನು ಹೇಳಬಹುದೇ ? ನಾನು ಅಷ್ಟೊಂದು ಬುದ್ಧಿವಂತೆ ಅಲ್ಲ. ಯಾರಿಗಾದರೂ ಈ ಬಗ್ಗೆ ಏನಾದರೂ ಅರಿವಿದ್ದರೆ ತಿಳಿಸಿಕೊಡಿ’ ಎಂದು ಮಮತಾ ಹೇಳಿದ್ದಾರೆ.

Also Read  ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್

 

error: Content is protected !!
Scroll to Top