ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.24. ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಹೊಸದಿಲ್ಲಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಗಗನಸಖೀಯ ಜತೆಗೆ ಇಬ್ಬರು ವ್ಯಕ್ತಿಗಳು ನಿಯಮ ಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ತಕ್ಷಣವೇ ವಿಮಾನದಿಂದ ಇಳಿಸಲಾಗಿದೆ.

ಅವರಿಬ್ಬರು ಗಗನಸಖೀಯ ಜತೆಗೆ ವಾಗ್ವಾದದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೂಡಲೇ ಅವರಿಬ್ಬರನ್ನು ಹೊಸದಿಲ್ಲಿ ಏರ್‌ಪೋರ್ಟ್‌ನ ಭದ್ರತಾ ಸಿಬಂದಿ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರ ಪೈಕಿ ಒಬ್ಟಾತ ಸಿಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ಪೈಸ್‌ ಜೆಟ್‌ನ ವಕ್ತಾರರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Also Read  ಇಸ್ಲಾಮಾಬಾದ್‌ನಲ್ಲಿ ಕಾರ್ ಬಾಂಬ್ ಸ್ಫೋಟ   ➤ ಇಬ್ಬರು ಶಂಕಿತ ಉಗ್ರರು, ಓರ್ವ ಪೊಲೀಸ್  ಮೃತ್ಯು           

error: Content is protected !!
Scroll to Top