(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಜ.24. ಗೂಗಲ್ ಸಂಸ್ಥೆಯು ತನ್ನ ಉದ್ಯೋಗಿಗಳಲ್ಲಿ 12,000 ಜನರನ್ನು ವಜಾ ಮಾಡುವ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ ಸಂಸ್ಥೆಯು ಭಾರೀ ಬಿಕ್ಕಟ್ಟಿಗೆ ಸಿಲುಕುತ್ತಿತ್ತು. ಗೂಗಲ್‌ನ ಮಾಲಕರ ಆಂತರಿಕ ಸಭೆಯಲ್ಲೇ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದಾರೆ.
ಗೂಗಲ್‌ನ ಕೆಲಸದ ಒತ್ತಡ ಕಡಿಮೆಯಾಗಿದ್ದು, ಸಿಬ್ಬಂದಿ ಸಂಖ್ಯೆ ಅಧಿಕವಾಗಿತ್ತು. ಸಂಸ್ಥೆಯ ಒಟ್ಟು ಸಿಬ್ಬಂದಿಯಲ್ಲಿ 6% ಎಂದರೆ 12,000 ಉದ್ಯೋಗಿಗಳ ಬಿಡುಗಡೆ ಅನಿವಾರ್ಯದ ನಿರ್ಧಾರ. ಎಲ್ಲರಿಗೂ ಮಿಂಚಂಚೆ ಮೂಲಕ ಮಾಹಿತಿ ನೀಡಲಾಗಿದೆ. ಅಮೇರಿಕದಲ್ಲಿ ಈಗಾಗಲೇ ಜಾರಿ ಆಗಿದೆ. ಹೊರ ದೇಶದ ಉದ್ಯೋಗಿಗಳ ವಿಷಯದಲ್ಲಿ ಸ್ಥಳೀಯ ಕಾನೂನುಗಳು ಸಹ ಅನ್ವಯಿಸುವುದರಿಂದ ಬಿಡುಗಡೆ ಕೆಲ ದಿನ ತೆಗೆದುಕೊಳ್ಳಬಹುದು ಎಂದು ಹೇಳಿದರು.