(ನ್ಯೂಸ್ ಕಡಬ)newskadaba.com ಮಂಗಳೂರು, ಜ.24. ‘ಭಗವತಿ ಫ್ರೇಮ್’ ಎಂಬ ಹೆಸರಿನ ಬೃಹದಾದ ಡ್ರೆಜ್ಜರ್ ನೌಕೆಯೊಂದು ನಗರದ ಹೊರವಲಯದ ಸುರತ್ಕಲ್‌ನ ಗುಡ್ಡೆಕೊಪ್ಲ ಸಮುದ್ರ ಬದಿಯಲ್ಲಿ ನಿಷ್ಕ್ರೀಯಗೊಂಡು ನಿಂತಿದ್ದು, ಸ್ಥಳೀಯ ಮೀನುಗಾರರಿಗೆ ಸಾಕಷ್ಟು ತೊಂದರೆ ಕೊಡುತ್ತಿತ್ತು.
ಇದೀಗ ಮೂರು ವರ್ಷಗಳ ನಂತರ ಈ ಬೃಹತ್ ನೌಕೆಗೆ ಮುಕ್ತಿ ನೀಡುವ ಕಾರ್ಯ ಆರಂಭವಾಗಿದೆ. ಈ ನಿಂತಿರುವ ಡ್ರೆಜ್ಜರ್ ನೌಕೆಯು 114 ಮೀಟರ್ ಉದ್ದ, 21 ಮೀಟರ್ ಅಗಲ, 9,492 ಟನ್ ತೂಕವನ್ನು ಹೊಂದಿದೆ. ಕಡಲ ಕಿನಾರೆಯಲ್ಲಿ ಮುಳುಗಿರುವ ಈ ಡ್ರೆಜ್ಜರ್‌ನ್ನು ಒಡೆಯುವ ಕಾರ್ಯ ಆರಂಭವಾಗಿದೆ.
ಭಗವತಿ ಪ್ರೇಮ್ ಡ್ರೆಜ್ಜರ್‌ನ್ನು ಸಮುದ್ರದಲ್ಲಿ ನಿಲುಗಡೆ ಮಾಡಲಾಗಿದ್ದ ಸಂದರ್ಭದಲ್ಲಿ ಮುಳುಗಿದ್ದು, ಅದರಲ್ಲಿದ್ದವರನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಸಮುದ್ರದಲ್ಲಿ ಉಳಿದಿದ್ದ ಈ ಹಡಗನ್ನು 2019ರ ಅಕ್ಟೋಬರ್‌ನಲ್ಲಿ ಗುಡ್ಡೆಕೊಪ್ಪ ಸಮುದ್ರ ತೀರಕ್ಕೆ ತಂದು ನಿಲ್ಲಿಸಲಾಗಿತ್ತು. ಇದರಿಂದಾಗ ಇಲ್ಲಿನ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದಕ್ಕೆ ತೊಂದರೆಯುಂಟಾಗಿತ್ತು ಎಂದು ತಿಳಿದುಬಂದಿದೆ.