ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು: ಸೀತಾರಾಮ ರೈ ► ಸರಸ್ವತೀ ವಿದ್ಯಾಲಯದಲ್ಲಿ ‘ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಗಾರ’

(ನ್ಯೂಸ್ ಕಡಬ) newskadaba.com ಕಡಬ, ಡಿ.18. ಹೈನುಗಾರಿಕೆಯು ಒಂದು ಉತ್ತಮ ಉದ್ಯೋಗವಾಗಿದ್ದು, ವೈಜ್ಞಾನಿಕ ಕಾಲಘಟ್ಟದಲ್ಲಿ ದನಗಳಿಗೆ ಉತ್ತಮ ಪಶು ಆಹಾರವನ್ನು ನೀಡಿ ಅದರ ಆರೋಗ್ಯವನ್ನು ಕಾಪಾಡುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ದ.ಕ.ಸ.ಹಾ.ಉ ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾದ ಸೀತಾರಾಮ ರೈ ಸವಣೂರು ಹೇಳಿದರು.

ಅವರು ಭಾನುವಾರದಂದು ಕಡಬದ ಶ್ರೀ ಸರಸ್ವತೀ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು‌. ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರರಮಣ ರಾವ್ ಮಾತಾನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಹೈನುಗಾರಿಕೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ಸ್ವದೇಶಿ ತಳಿಗಳ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು . ಸ್ವದೇಶೀ ತಳಿಗಳಿಂದ ದೊರೆಯುವ ಹಾಲು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ ಎಂದರು‌. ಈ ಸಂದರ್ಭದಲ್ಲಿ ರೈತ ಕಲ್ಯಾಣ ಟ್ರಸ್ಟ್‌ ನ ವತಿಯಿಂದ ಸಂಘದ ಸದಸ್ಯರಾದ ಬೆಳಿಯಪ್ಪ ಗೌಡ ಮರ್ಧಾಳರವರಿಗೆ 15 ಸಾವಿರದ ಚೆಕ್ ಹಸ್ತಾಂತರಿಸಲಾಯಿತು.

Also Read  ಡಿಸೆಂಬರ್ ನಿಂದ "ಮುಖ್ಯಮಂತ್ರಿ ಅನಿಲ ಭಾಗ್ಯ" ಯೋಜನೆ ಜಾರಿ ► ಯಾರಿಗೆಲ್ಲ ಸಿಗಲಿದೆ ರಾಜ್ಯ ಸರಕಾರದ ಈ ಯೋಜನೆ..??

ವೇದಿಕೆಯಲ್ಲಿ ಕೆ.ಎಂ.ಎಫ್ ತರಬೇತಿ ಕೇಂದ್ರ, ಮೈಸೂರಿನ ನಿರ್ದೇಶಕರಾದ ಡಾ| ಕೆ.ಪಿ ಶಿವಶಂಕರ್, ಅಪರ ನಿರ್ದೇಶಕರಾದ ಶ್ರೀ ಎಚ್.ಎಂ ಮಹಾದೇವ ಸ್ವಾಮಿ, ಉಪನ್ಯಾಸಕರಾದ ಡಾ| ರಾಮಕೃಷ್ಣ ಭಟ್, ವಿಸ್ತರಣಾ ಅಧಿಕಾರಿ ಮಂಜುನಾಥ್, ಗ್ರಾಮ ವಿಕಾಸ ಸಮಿತಿ ಕೋಡಿಂಬಾಳದ ಸಂಯೋಜಕರಾದ ಮಂಜುನಾಥ ಶೆಟ್ಟಿ, ಸರಸ್ವತೀ ವಿದ್ಯಾಲಯದ ಮುಖ್ಯಗುರುಗಳಾದ ಮಾಧವ ಕೋಲ್ಪೆ, ಕಡಬ ಹಾ.ಉ.ಸ.ಸಂಘದ ಕಾರ್ಯದರ್ಶಿ ಕುಂಞಣ್ಣ ಕುದ್ರಡ್ಕ ಮೊದಲಾದವರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಕಡಬ ಹಾ.ಉ.ಸ.ಸಂಘದ ಅಧ್ಯಕ್ಷರಾದ ಜಯಚಂದ್ರ ರೈ ವಹಿಸಿದ್ದರು. ಮಂಜುನಾಥ ಶೆಟ್ಟಿ ಸ್ವಾಗತಿಸಿ, ಮಾಧವ ಕೋಲ್ಪೆ ವಂದಿಸಿದರು‌. ವಸಂತ ಕರ್ಂಬೋಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಉಡುಪಿ: 'ಕರೆಂಟ್ ಬಿಲ್ ಕೊಡಬೇಡಿ, ಕಟ್ಟಲ್ಲ' ➤ ಮೀಟರ್ ಬೋರ್ಡ್ಗೆ ಚೀಟಿ ಅಂಟಿಸಿದ ಭೂಪ

error: Content is protected !!
Scroll to Top