ರೈತರಿಗೆ ಮತ್ತೊಂದು ಗುಡ್ ನ್ಯೂಸ್ ➤ ಜ. 31 ರಂದು ‘ರೈತಶಕ್ತಿ’ ಯೋಜನೆಗೆ ಸಿಎಂ ಚಾಲನೆ                             

(ನ್ಯೂಸ್ ಕಡಬ)newskadaba.com  ಧಾರವಾಡ, ಜ.24. ಕೃಷಿ ಇಲಾಖೆಯ ನೂತನ ಯೋಜನಾ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ. 31 ರಂದು ಕೃಷಿ ಇಲಾಖೆಯ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಸಭಾಭವನದ ಸಭಾಂಗಣದಲ್ಲಿ ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಮಾಹಿತಿ ನೀಡಿದ್ದಾರೆ.

ಜ.31 ರಂದು ಮುಖ್ಯಮಂತ್ರಿಗಳು ಕೃಷಿ ಇಲಾಖೆಯ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ರೈತರಿಗೆ ಉಚಿತ ಡೀಸೆಲ್ ಇಂಧನ ವಿತರಿಸುವ ರೈತ ಶಕ್ತಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರೈತ ಮಕ್ಕಳಿಗೆ ನೀಡುವ ರೈತನಿಧಿ ವಿದ್ಯಾರ್ಥಿ ವೇತನವನ್ನು ರೈತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸುವ ಯೋಜನೆಗೆ ಚಾಲನೆ ನೀಡುವರು. ಡಾ.ಎಸ್.ವಿ. ಪಾಟೀಲ ಫೌಂಡೇಶನ್ ಉದ್ಘಾಟಿಸುವರು ಎಂದು ವರದಿ ತಿಳಿಸಿದೆ.

Also Read  ಸುಳ್ಯ: ಕೋವಿಡ್ ಶಂಕಿತ ವ್ಯಕ್ತಿ ಮೃತ್ಯು

 

 

 

error: Content is protected !!
Scroll to Top