ತನಗೆ ತಾನೇ ವಾಟ್ಸ್​ ಆಪ್​ ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ..!

(ನ್ಯೂಸ್ ಕಡಬ)newskadaba.com  ಮುಂಬೈ, ಜ.24. ಕೆಲವರು ತಮಗೆ ತಾವೇ ವಿಚಿತ್ರವಾಗಿ ಅಂತ್ಯ ಹೇಳಿಕೊಳ್ಳುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಲ್ಲೊಂದು ಕಡೆ ನಡೆದಿದ್ದು, ಯುವಕನೊಬ್ಬ ತನಗೇ ತಾನೇ ವಾಟ್ಸ್​ ಆಪ್​ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿಕೊಂಡಿದ್ದ. ವಿಚಿತ್ರವೆಂದರೆ ಆತ ಹಾಗೆ ಸ್ಟೇಟಸ್ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ ಆತನ ಶವ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು ಎನ್ನಲಾಗಿದೆ.

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನೇರಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್‌ಇನ ರಿಷಿಕೇಶ್ ದಿಲಿಪ್​ ಖೊಡ್ಪೆ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಜತೆ ನೆಲೆಸಿದ್ದ ಈತ ಮೂಡ್ ಆಫ್​ ಅಂತ ವಾಟ್ಸ್​  ಆಪ್​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ.

Also Read  ಕುಕ್ಕೆಗೂ ತಟ್ಟಿದ ಕೋರೊನಾ ಬಿಸಿ ➤ ದೇವಾಲಯಗಳ ಆದಾಯದಲ್ಲಿ ಭಾರೀ ಇಳಿಕೆ

ಮರುದಿನ ತನಗೆ ತಾನೇ ಶ್ರದ್ಧಾಂಜಲಿ ಹೇಳಿಕೊಳ್ಳವಂತೆ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಈತ, ನಂತರ ತನ್ನ ಕಸಿನ್ ಪ್ರದೀಪ್ ಖೊಡ್ಪೆಗೆ ಕರೆ ಮಾಡಿ, ನಿನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದ. ಎಲ್ಲಿದ್ದಿಯಾ ಎಂದು ಪ್ರದೀಪ್ ಕೇಳಿದಾಗ ಗೋರಖ್ ಬಾಬಾ ಫಾರ್ಮ್​ನಲ್ಲಿದ್ದೇನೆ ಎಂದಿದ್ದ. ಕೂಡಲೇ ಪ್ರದೀಪ್ ಅಲ್ಲಿಗೆ ಹೋದರೆ ಅಲ್ಲಿನ ಮರವೊಂದರಲ್ಲಿ ರಿಷಿಕೇಶ್ ನೇಣು ಹಾಕಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

error: Content is protected !!
Scroll to Top