ಮನೆಯಿಂದ ಚಿನ್ನಾಭರಣ ದರೋಡೆ ಪ್ರಕರಣ ➤ ಸೊತ್ತು ಸಹಿತ ಇಬ್ಬರು ಅಂದರ್..!

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಜ.24. ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ಬೆಂಗಳೂರಿನ ಹೋಟೇಲ್ ಉದ್ಯಮ ನಡೆಸುತ್ತಿದ್ದ ರಾಜೇಶ ಪೂಜಾರಿ ರವರ ಮನೆಯಲ್ಲಿ ರಾತ್ರಿ ಕಳ್ಳರು ಮನೆಯ ಬಾಗಿಲು ಒಡೆದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.


ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ರವರ ಆದೇಶದಂತೆ ಬ್ರಹ್ಮಾವರರವರ ಸಿಪಿಐ ಅನಂತಪದ್ಮನಾಭ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಸದ್ರಿ ತಂಡದಲ್ಲಿನ ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಈ, ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಈ, ಕೋಟ ಸಿಬ್ಬಂದಿಯವರಾದ ಪ್ರದೀಪ ನಾಯಕ್, ರಾಘವೇಂದ್ರ, ಪ್ರಸನ್ನ ಬ್ರಹ್ಮಾವರ ಠಾಣಾ ಸಿಬ್ಬಂದಿ ವೆಂಕಟರಮಣ ದೇವಾಡಿಗ, ರವರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನ ಮೇಲೆ ನಿಗಾ ಇರಿಸಿ, ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮೇರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳ ಮೇಲೆ ನಿಗಾವಹಿಸಿರುತ್ತಾರೆ.

Also Read  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥ ನಿರ್ಮಾಣ ➤ ಇದು ಮಲೆಕುಡಿಯರಿಗೆ ಒಲಿದ ಕಲೆ

error: Content is protected !!
Scroll to Top