ವಿದೇಶಿಗರ ಕಣ್ಮನ ಸೆಳೆದ ‘ಮಂಗಳೂರು ಕಂಬಳ’      

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ 6ನೇ ವರ್ಷದ ರಾಮ- ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಚಾಲನೆ ದೊರೆತಿದ್ದು, ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿರುವ ಈ ಮಂಗಳೂರು ಕಂಬಳ ವಿದೇಶಿಗರ ಕಣ್ಮನ ಸೆಳೆದಿದೆ. ಅಫ್ಘಾನಿಸ್ತಾನ, ಜರ್ಮನಿ ಮತ್ತು ಡೆನ್ಮಾರ್ಕ್‌ನಿಂದ ಮಂಗಳೂರಿಗೆ ಬಂದ ವಿದೇಶಿಗರು ನಿನ್ನೆ ಕಂಬಳ ವೀಕ್ಷಿಸಿದರು.

ಡೆನ್ಮಾರ್ಕ್‌ ಮೂಲದ ಹೆನ್ರಿ ಎಂಬುವವರು ಮಾತನಾಡಿ, ಬಿಸ್ನೆಸ್ ಟ್ರಿಪ್ ನಲ್ಲಿದ್ದೆವು. ಕಂಬಳವನ್ನು ಲೈವ್ ಆಗಿ ನೋಡುವುದು ನಮ್ಮ ಆಸೆಯಾಗಿತ್ತು. ಮಂಗಳೂರು ಕಂಬಳ ಹಾಗೂ ಶ್ರೀನಿವಾಸ್ ಗೌಡ ಬಗ್ಗೆ ಆನ್ ಲೈನ್ ಮೂಲಕ ಮಾಹಿತಿ ಪಡೆದುಕೊಂಡಿದ್ದೆವು. ಇಂತಹ ವಿಶಿಷ್ಟವಾದ ಕ್ರೀಡೆ ವೀಕ್ಷಿಸಲು ಬಹಳಷ್ಟು ಉತ್ಸುಕರಾಗಿದ್ದೆವು. ಕಂಬಳ ವೀಕ್ಷಿಸಿದ್ದು ಬಹಳ ಸಂತಸ ತಂದಿದೆ ಎಂದು ಹೇಳಿದ್ದಾರೆ. ಹೆನ್ರಿಯವರು ಕಂಬಳ ವೀಕ್ಷಿಸುತ್ತಿದ್ದ ವೇಳೆ ಅವರ ಸ್ನೇಹಿತರಾದ ಥಾಮಸ್, ಕಾರ್ಸ್ಟನ್, ಪೀಟ್ ಮತ್ತು ಸುಸನ್ನಾ ಅವರ ಜೊತೆಗಿದ್ದರು.

Also Read  ಮಂಗಳೂರು: ಸತ್ತ ಡಾಲ್ಫಿನ್ ಮೀನು ತಣ್ಣೀರು ಬಾವಿ ಕಿನಾರೆಯಲ್ಲಿ ಪತ್ತೆ

 

error: Content is protected !!
Scroll to Top