ಶೌಚಾಲಯಕ್ಕೆ ನುಗ್ಗಿ ವಿದ್ಯಾರ್ಥಿನಿಗೆ ಕಿರುಕುಳ ಪ್ರಕರಣ ➤ ಆರೋಪಿ ಅರೆಸ್ಟ್

crime, arrest, suspected

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ (42) ಬಂಧಿತ ಆರೋಪಿ. ವಿಜಯ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ಆರೋಪಿಯು ನುಗಿದ್ದ. ಘಟನೆ ನಡೆದ 13 ದಿನಗಳ ಬಳಿಕ ಕೊನೆಗೂ ಆರೋಪಿಯನ್ನು ಜಯನಗರ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಗ್ಯಾಸ್ಟ್ರೊಲಜಿ ಖಾಯಿಲೆಯಿಂದ ಬಳಲುತ್ತಿದ್ದ ಅಜಯ್, ವಿಜಯ ಕಾಲೇಜು ಬಳಿ ತೆರಳುತಿದ್ದ. ಈ ವೇಳೆ ಗಡಿಬಿಡಿಯಲ್ಲಿ ಲೇಡಿಸ್ ಬಾತ್ ರೂಂಗೆ ತೆರಳಿದ್ದ. ಈ ವೇಳೆ ಹೆಣ್ಣುಮಕ್ಕಳನ್ನು ಕಂಡು ಗಾಬರಿಯಾಗಿ ಅವರ ಬಾಯಿ ಮುಚ್ಚಿ, ಬೆದರಿಕೆ ಹಾಕಿದ್ದ. ಸದ್ಯ ಆಡಳಿತ ಮಂಡಳಿ ದೂರಿನನ್ವಯ ಆರೋಪಿ ಅಜಯ್ ಬಂಧನವಾಗಿದೆ. ವಿದ್ಯಾರ್ಥಿನಿಯೊಬ್ಬಳು ಶೌಚಾಗೃಹದ ಒಳಗೆ ಹೋಗಿದ್ದಳು. ಈ ವೇಳೆ ಅದೇ ಶೌಚಗೃಹದ ಒಳಗಡೆ ಯುವಕನೊಬ್ಬ ನುಗ್ಗಿದ್ದ. ಬಳಿಕ ವಿದ್ಯಾರ್ಥಿನಿಯ ಜೊತೆ ಅಸಭ್ಯ‌ವಾಗಿ ವರ್ತಿಸಿದ್ದ.

Also Read  ಮಹಿಳೆಯ ಬ್ಯಾಗ್ ನಿಂದ ನಗದು ಕಳವು-ದೂರು ದಾಖಲು

error: Content is protected !!
Scroll to Top