ಅಪಘಾತವನ್ನು ತಪ್ಪಿಸುವ ಭರದಲ್ಲಿ ಕಾವೇರಿ ನದಿಗೆ ಉರುಳಿದ ಕಾರು ► ನಾಲ್ವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮಡಿಕೇರಿ, ಡಿ.18. ಅಪಘಾತವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾವೇರಿ ನದಿಗೆ ಉರುಳಿ ಬಿದ್ದ ಘಟನೆ ಕುಶಾಲನಗರ ಸಮೀಪದ ಬೇತ್ರಿ ಸೇತುವೆ ಬಳಿ ಭಾನುವಾರದಂದು ನಡೆದಿದೆ.

ಆಂಧ್ರ ಪ್ರದೇಶ ಮೂಲದ ವಿಷ್ಣು ಎಂಬವರು ತನ್ನ ಸ್ನೇಹಿತರಾದ ರಕ್ಷಿತ, ಶರಣ್ಯ ಮತ್ತು ಚಂದನ್ ಎಂಬವರೊಂದಿಗೆ ಶನಿವಾರದಂದು ಬೆಂಗಳೂರಿನಿಂದ ಕಾರೊಂದನ್ನು ಬಾಡಿಗೆಗೆ ಪಡೆದು ಮಡಿಕೇರಿಗೆ ಆಗಮಿಸಿದ್ದರು. ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಮಡಿಕೇರಿಯಿಂದ ನಾಗರಹೊಳೆಗೆ ತೆರಳುತ್ತಿದ್ದಾಗ ಮೂರ್ನಾಡು ಬಳಿಯ ಬೇತ್ರಿ ಸೇತುವೆ ಬಳಿ ಕಾರನ್ನು ಚಲಾಯಿಸುತ್ತಿದ್ದ ರಕ್ಷಿತ ಅವರು ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಯ ಮೇಲಿನಿಂದ ಹೊಳೆಗೆ ಬಿದ್ದಿದೆ.

Also Read  ಅಕ್ರಮ ಮರಳು ಸಾಗಾಣಿಕೆ ➤ ಟ್ರ್ಯಾಕ್ಟರ್ ವಶಕ್ಕೆ..!!

ಘಟನೆಯಲ್ಲಿ ನಾಲ್ವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

error: Content is protected !!
Scroll to Top