ಫೆ.4 & 5 ರಂದು 37 ನೇ ಪತ್ರಕರ್ತರ ರಾಜ್ಯ ಸಮ್ಮೇಳನ

(ನ್ಯೂಸ್ ಕಡಬ)newskadaba.com ವಿಜಯಪುರ, ಜ.23. ಬಸವನಾಡು, ಗೊಮ್ಮಟ ಬೀಡು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಫೆಬ್ರವರಿ 4 & 5 ರಂದು ಎರಡು ದಿನ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ.

ನಗರದ ಪತ್ರಿಕಾ ಭವನದಲ್ಲಿ ಸಮ್ಮೇಳನದ ಸಿದ್ಧತೆಗಳನ್ನು ಪರಿಶೀಲಿಸಲು ಕರೆಯಲಾಗಿದ್ದ ವಿವಿಧ ಸಮಿತಿಗಳ ಸಭೆಯ ಸಂದರ್ಭದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು. ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಪತ್ರಕರ್ತರ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ.

Also Read  ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಾಟ ನೀಡಿದ ಪಾಪಿಪತಿ ➤ ರೊಚ್ಚಿಗೆದ್ದ ಪತ್ನಿ ಮಾಡಿದ್ದೇನು ಗೊತ್ತೆ.!?

error: Content is protected !!
Scroll to Top