ಆಂಧ್ರದಿಂದ ಖೋಟಾ ನೋಟು ತಂದು ಚಲಾವಣೆಗೆ ಯತ್ನ   ➤ ಮಹಿಳೆ ಸೇರಿ ಇಬ್ಬರ ಬಂಧನ, 40 ಲಕ್ಷ ರೂ. ನಕಲಿ ನೋಟು ಜಪ್ತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ಆಂಧ್ರಪ್ರದೇಶದಿಂದ ಖೋಟಾ ನೋಟು ತಂದು ಚಲಾವಣೆಗೆ ಪ್ರಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 40 ಲಕ್ಷ ರೂ. ನಕಲಿ ನೋಟು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಿ.ಚರಣ್ ಸಿಂಗ್ (47) ಮತ್ತು ರಜಪುತ್ರ ರಜನಿ (38) ಬಂಧಿತರು ಎಂದು ಗುರುತಿಸಲಾಗಿದೆ.

500 ರೂ. ಮುಖ ಬೆಲೆಯ 40 ಲಕ್ಷ ರೂ. ಮೌಲ್ಯದ ಖೋಟಾ ನೋಟು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರ ಮೂಲದ ಚರಣ್ ಮತ್ತು ರಜಿನಿ, ಆನಂತಪುರದಲ್ಲಿ ಪರಿಚಯಸ್ಥರಿಂದ ನಕಲಿ ನೋಟುನ್ನು ಕಡಿಮೆ ಬೆಲೆಗೆ ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಪ್ರಯತ್ನಿಸುತ್ತಿದ್ದರು. ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಪೂರ್ಣ ಪ್ರಜ್ಞಾ ಲೇಔಟ್‌ನ ಸಾಧನಾ ಕಾಲೇಜು ಹತ್ತಿರ ಬೊಲೆರೊ ಜೀಪ್‌ನಲ್ಲಿ ಚರಣ್ ಮತ್ತು ರಜಿನಿ ನಕಲಿ ನೋಟು ತಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಮೇರೆಗೆ ಮಫ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಬೊಲೆರೋ ಜೀಪ್ ಬಳಿಗೆ ಹೋದಾಗ ಚರಣ್ ಹೊರಗೆ ನಿಂತು ಗಿರಾಕಿಗಳಿಗೆ ಕಾಯುತ್ತಿರುವುದು ಕಂಡು ಬಂದಿದೆ.

Also Read  ಕಡಬ: ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗಗ್ರಹಣ ಸಮಾರಂಭ

error: Content is protected !!
Scroll to Top