ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ 

(ನ್ಯೂಸ್ ಕಡಬ)newskadaba.com ಲಾಹೋರ್​, ಜ.23. ತಮ್ಮೊಂದಿಗೆ ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿನಿಯರು ಸೇರಿ, ಸಹಪಾಠಿ ವಿದ್ಯಾರ್ಥಿನಿ ಮೇಲೆ ಶಾಲೆಯ ಕ್ಯಾಂಟಿನ್​ನಲ್ಲೇ ಹಲ್ಲೆ ಮಾಡಿ, ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಪಾಕಿಸ್ತಾನ ರಾಜಧಾನಿ ಲಾಹೋರ್​ನಲ್ಲಿರುವ ಅಮೆರಿಕನ್​ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದಿದೆ.

ಈ ಘಟನೆ ಪಾಕಿಸ್ತಾನದಾದ್ಯಂತ ಚರ್ಚೆ ಹುಟ್ಟು ಹಾಕಿರುವುದಲ್ಲದೆ, ವಿದ್ಯಾರ್ಥಿನಿಯರ ವರ್ತನೆ ನೋಡಿ ಶಾಕ್​ ಆಗಿದ್ದಾರೆ. ಅದರಲ್ಲೂ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರುವ ಪಾಕ್​ನಂತಹ ದೇಶದಲ್ಲೇ ಈ ರೀತಿಯ ಘಟನೆ ನಡೆದಿರುವುದು ಅಚ್ಚರಿಯೇ ಸರಿ.

ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಹಪಾಠಿ ವಿದ್ಯಾರ್ಥಿನಿಯ ಕೂದಲು ಹಿಡಿದೆಳೆದು, ಕೆಳಗೆ ಬೀಳಿಸಿರುವುದು ಮತ್ತು ಆಕೆಯ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಕುಳಿತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿ, ಕಾಲಲ್ಲಿ ಒದ್ದು, ಕ್ಷಮೆ ಕೋರುವಂತೆ ಆಗ್ರಹಿಸುತ್ತಿರುವುದನ್ನು ನೋಡಬಹುದಾಗಿದೆ.

Also Read  ವಿಮಾನ ಪತನ- ಪ್ರವಾಣಿ ತಾಣಕ್ಕೆ ತೆರಳಿದ್ದ 14 ಮಂದಿ ದುರ್ಮರಣ

 

error: Content is protected !!
Scroll to Top