ಡಿ.21: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ► ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತ ಪ್ರವಚನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.18. ಝಕರಿಯಾ ಜುಮಾ ಮಸೀದಿ ಬೆಳ್ಳಾರೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿಯು ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತಪ್ರವಚನವು ಡಿಸೆಂಬರ್ 21 ರಂದು ಝಕರಿಯಾ ಜುಮಾ ಮಸೀದಿಯಲ್ಲಿ ನಡೆಯಲಿದೆ.

ಸಂಜೆ ಘಂಟೆ 4.30 ರಿಂದ ದಫ್ ರಾತೀಬ್, ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್, ರಾತ್ರಿ ಘಂಟೆ 8.00 ರಿಂದ ಬಹು| ಇಬ್ರಾಹೀಂ ಬಾಖವಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬಹು| ಅಬೂಬಕ್ಕರ್ ಉಸ್ತಾದ್ ಪಳ್ಳತ್ತಿಮ್ಮಾರ್ ದಫ್ ರಾತೀಬಿಗೆ ನೇತೃತ್ವವನ್ನು ನೀಡಲಿದ್ದು, ಬಹು| ಸಯ್ಯದ್ ಪೂಕೋಯ ತಂಙಳ್ ಪುತ್ತೂರು ದುವಾ ನೇತೃತ್ವವನ್ನು ನೀಡಲಿದ್ದಾರೆ. ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮುದರ್ರಿಸರಾದ ಬಹು| ತಾಜುದ್ದೀನ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿಯ ಅಧ್ಯಕ್ಷರಾದ ಆಶಿರ್ ಎ.ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ವಿಟ್ಲ: ಅಪ್ರಾಪ್ತ ಸಹೋದರನಿಂದ ನಿರಂತರ ಅತ್ಯಾಚಾರ ► 13 ವರ್ಷದ ಬಾಲಕಿ ಗರ್ಭಿಣಿ

error: Content is protected !!
Scroll to Top