ಆಸ್ತಿಗಾಗಿ ಆಂಧ್ರದಲ್ಲಿ ಹತ್ಯೆ ಮಾಡಿ ಕರ್ನಾಟಕದಲ್ಲಿ ಮೃತದೇಹ ಎಸೆದ ಸಂಬಂಧಿಕರು…!!!

(ನ್ಯೂಸ್ ಕಡಬ)newskadaba.com ವಿಜಯಪುರ, ಜ.23. ಹೊಸವರ್ಷದಂದು ಕೊಲೆ ಮಾಡಿ ಮೃತದೇಹವನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಎಸೆದು ಹೋಗಿದ್ದರು. ಎಷ್ಟರ ಮಟ್ಟಿಗೆ ಇವರು ಕ್ರೂರತನ ತೋರಿಸಿದ್ದರು ಎಂದರೆ ಮುಖದ ಗುರುತೇ ಸಿಗಬಾರದು ಎಂದು ಮುಖವನ್ನು ಕೊಚ್ಚಿ ಹಾಕಿ ವಿರೂಪಗೊಳಿಸಿದ್ದರು.

ಮೃತ ವ್ಯಕ್ತಿಯ ಬಗ್ಗೆ ಯಾರಿಗೂ ಮಾಹಿತಿ ಸಿಗಬಾರದು ಎಂದು ಆತನನ್ನು ಬೆತ್ತಲೆ ಮಾಡಿ ಶವವನ್ನು ದೇವನ ಹಳ್ಳಿಯಲ್ಲಿ ಎಸೆದು ಹೋಗಿದ್ದರು. ಆದರೆ ಈ ಪ್ರಕರಣವನ್ನು ಪೊಲೀಸರು 20 ದಿನಗಳ ಒಳಗಾಗಿ ಭೇದಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರದ ಅನಂತಪುರ ಮೂಲದ ಮುತ್ಯಾಲಪ್ಪ(40) ಎನ್ನುವಾತ ಕೊಲೆಯಾಗಿದ್ದ ಮೃತ ದುರ್ದೈವಿ. ಜಮೀನು ವ್ಯಾಜ್ಯ ಇದ್ದ ಹಿನ್ನೆಲೆಯಲ್ಲಿ ತಲೆ ಮತ್ತು ಕೈ ಬೆರಳುಗಳನ್ನ ಜಜ್ಜಿ ಆರೋಪಿಗಳು ಕೊಲೆ ಮಾಡಿದ್ದರು. ಆಧಾರ್ ಕಾರ್ಡಿನಲ್ಲೂ ಮೃತನ ಗುರುತು ಸಿಗದಂತೆ ಈ ಖದೀಮರು ಮುಖ ತಲೆ ಬೆರಳುಗಳನ್ನ ಜಜ್ಜಿದ್ದರು ಎನ್ನಲಾಗಿದೆ.

Also Read  ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ  

 

error: Content is protected !!
Scroll to Top