ನಾಳೆ ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.23. ದಿನನಿತ್ಯದ ಓಡಾಟಕ್ಕೆ ಸಮೂಹ ಸಾರಿಗೆಯನ್ನೇ ನಂಬಿಕೊಂಡಿರುವ ಸಾರ್ವಜನಿಕರು, ನಾಡಿದ್ದು ಬಸ್​ಗಳನ್ನು ನಂಬಿಕೊಂಡು ಹೊರಗೆ ಹೊರಡದಿರುವುದು ಒಳಿತು. ಏಕೆಂದರೆ, ನಾಳೆ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ಜ.24ರಂದು ಸಾರಿಗೆ ನೌಕರರು ನಗರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ದಿನ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ ಇದೆ. ರಾಜ್ಯ ಸರ್ಕಾರವು 6 ವರ್ಷಗಳೇ ಕಳೆದರೂ ವೇತನ ಹೆಚ್ಚಳ ಮಾಡದಿರುವುದರಿಂದ ಸಿಡಿದೆದ್ದಿರುವ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Also Read  ಉಡುಪಿ: ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಗೆ ಅಧಿಕಾರಿಗಳಿಂದ ದಾಳಿ

error: Content is protected !!
Scroll to Top