ಮೈಸೂರಿನಲ್ಲಿ ಮುಂದುವರಿದ ಚಿರತೆ ಹಾವಳಿ ➤ 11 ವರ್ಷದ ಬಾಲಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ತಿ.ನರಸೀಪುರ, ಜ.23. ಮೈಸೂರಿನ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಚಿರತೆ ದಾಳಿಯ ಶಂಕೆ ವ್ಯಕ್ತವಾಗಿದೆ.

ಮೃತನನ್ನು ಜಯಂತ್ ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ಗ್ರಾಮದ ಹೊರವಲಯದಲ್ಲಿ 2 ಕಿ.ಮೀ ದೂರದಲ್ಲಿ ಗಿಡಗಂಟಿಗಳ ನಡುವೆ ಪತ್ತೆಯಾಗಿದೆ. ಕಳೆದ 48 ಗಂಟೆಗಳಲ್ಲಿ ಶಂಕಿತ ಚಿರತೆ ದಾಳಿಯಲ್ಲಿ ಇದು ಎರಡನೇ ಮತ್ತು ತಿ.ನರಸೀಪುರ ತಾಲೂಕಿನಲ್ಲಿ ನವೆಂಬರ್‌ ತಿಂಗಳಿನಿಂದ ನಾಲ್ಕನೇ ಸಾವಾಗಿದೆ.

ದೂರು ಸ್ವೀಕರಿಸಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರೂ, ರಾತ್ರಿಯೇ ಶೋಧ ಕಾರ್ಯವನ್ನು ನಿಲ್ಲಿಸಲಾಯಿತು. ಬೆಳ್ಳಂಬೆಳಗ್ಗೆ ಸ್ಥಳೀಯ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದು, ಈ ವೇಳೆ ಬಾಲಕನ ಶವ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

Also Read  ರಿಯಾದ್ ನಲ್ಲಿ ಭಾರತೀಯ ವಿದ್ಯಾರ್ಥಿನಿ ಮೃತ್ಯು..!

 

error: Content is protected !!
Scroll to Top