ಶ್ರದ್ದಾ ವಾಕರ್ ಹತ್ಯೆ ಪ್ರಕರಣ ➤ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.23. ದೆಹಲಿಯಲ್ಲಿ ತನ್ನ ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ ಳನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ವಿರುದ್ದ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.

ಫೋರೆನ್ಸಿಕ್ ಸಾಕ್ಷ್ಯಗಳು, 100ಕ್ಕೂ ಅಧಿಕ ಸಾಕ್ಷಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚಾರ್ಜ್‌ಶೀಟ್‌ನಲ್ಲಿದೆ. ಅಫ್ತಾಬ್ ತಪ್ಪೊಪ್ಪಿಗೆ, ನಾರ್ಕೋ ಪರೀಕ್ಷೆಯ ಫಲಿತಾಂಶ, ಫೊರೆನ್ಸಿಕ್ ವರದಿಯನ್ನೂ ಉಲ್ಲೇಖಿಸಲಾಗಿದೆ. ಕಾನೂನು ತಜ್ಞರು ಇದನ್ನು ಪರಿಶೀಲಿಸುತ್ತಿದ್ದಾರೆ.

ಅಫ್ತಾಬ್ ಮತ್ತು ಶ್ರದ್ದಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಪೊಲೀಸರಿಗೆ ಲಭಿಸಿದ್ದು, ಆಕೆಯೊಂದಿಗೆ ಅಫ್ತಾಬ್ ಜಗಳವಾಡುತ್ತಿರುವ ಆಡಿಯೋ ಇದಾಗಿದ್ದು, ಧ್ವನಿ ಮಾದರಿ ಪರಿಶೀಲನೆಯಲ್ಲಿ ಹೊಂದಾಣಿಕೆಯಾಗಿದೆ. ಹೀಗಾಗಿ ಇದು ದೊಡ್ಡ ಸಾಕ್ಷ್ಯವಾಗಿ ಪರಿಣಮಿಸಬಹುದು ಎನ್ನಲಾಗಿದೆ.

Also Read  ನನಗೆ ಮತ್ತು ತಂದೆಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ➤ ಅಭಿಷೇಕ್ ಬಚ್ಚನ್ ಟ್ವೀಟ್‌..!!!

 

error: Content is protected !!