ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.23. ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಕುಂಡಂಗುಯಿಯಲ್ಲಿ ಸಂಭವಿಸಿದೆ ಎನ್ನಲಾಗಿದೆ.


ಕುಂಡಂಗುಯಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12)ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ.


ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ..

error: Content is protected !!

Join the Group

Join WhatsApp Group