ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ    ➤ ಆರೋಪಿ ಅರೆಸ್ಟ್                  

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಕಂಕನಾಡಿ ಬಳಿ ವರದಿಯಾಗಿದೆ. ಉಳ್ಳಾಲದ ನಿವಾಸಿ ನವಾಜ್‌ (35)ಗೆ ಥಳಿಸಲಾಗಿದೆ ಎನ್ನಲಾಗಿದೆ.

ಬಾಲಕಿ ಗಿಡವೊಂದರಿಂದ ಹಣ್ಣು ಕೀಳುತ್ತಿದ್ದಾಗ ಅಲ್ಲಿಯೇ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ನವಾಜ್‌ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಬೊಬ್ಬೆ ಹಾಕಿದ್ದಳು. ಇದನ್ನು ಕೇಳಿ ಅಲ್ಲಿದ್ದವರು ಬಂದು ನವಾಜ್ ಗೆ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

error: Content is protected !!
Scroll to Top