ಉಡುಪಿ: ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ !!

(ನ್ಯೂಸ್ ಕಡಬ)newskadaba.com  ಉಡುಪಿ, ಜ.21. ಉಡುಪಿ ನಗರದ ಬನ್ನಂಜೆಯಲ್ಲಿ ಉಬ್ಬು ಚಿತ್ರವಿರುವ ಅಪರೂಪದ ಐತಿಹಾಸಿಕ ಶಾಸನ ಪತ್ತೆಯಾಗಿದೆ. ಈ ಶಾಸನ ವಿಜಯನಗರದ ಕಾಲದ್ದು ಎಂದು ಹೇಳಲಾಗುತ್ತಿದೆ.

ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಈ ಅಪರೂಪದ ಶಾಸನ ಪತ್ತೆಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಬಾಯಿಮಾತಿನಲ್ಲಿ ಇದನ್ನು  ‘ನಿರ್ಪುಗಲ್ಲು’ ಎಂದೇ ಕರೆಯಲಾಗುತ್ತಿತ್ತಂತೆ. ಸುಮಾರು ಒಂದುವರೆ ಅಡಿ ಅಗಲ ನಾಲ್ಕು ಫೀಟು ಎತ್ತರ ಇರುವ ಈ ಶಾಸನದ ಬಲಭಾಗದಲ್ಲಿ ಚಂದ್ರ, ಎಡ ಭಾಗದಲ್ಲಿ ಸೂರ್ಯ. ಮಧ್ಯಭಾಗದಲ್ಲಿ ಪೀಠ ಇರುವ ಶಿವಲಿಂಗದ ಚಿತ್ರವಿದೆ.

Also Read  ಪರ್ಲಡ್ಕ: ಕಲ್ಲಿಮಾರಿನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ, ಉದ್ಘಾಟನೆ

error: Content is protected !!
Scroll to Top