ಸರ್ಕಾರಿ ಆಸ್ಪತ್ರೆ ರೋಗಿಗಳ ಕಂಬಳಿಗಳ ಮೇಲೆ ಹಂದಿ, ನಾಯಿಗಳ ಓಡಾಟ !       

(ನ್ಯೂಸ್ ಕಡಬ)newskadaba.com  ಧಾರವಾಡ, ಜ.21. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಹಾಸಿಗೆ ಹೊದಿಕೆಗಳನ್ನು ಹಂದಿ ಮತ್ತು ನಾಯಿಗಳು ತುಳಿದು ಹಾಕಿರುವ ಘಟನೆ ನಡೆದಿದೆ.

ಹಂದಿಗಳು, ನಾಯಿಗಳು ಹಾಗೂ ಇತರೆ ಬಿಡಾಡಿ ಪ್ರಾಣಿಗಳು ಓಡಾಡುವ ತೆರೆದ ಮೈದಾನದಲ್ಲಿ ರೋಗಿಗಳ ಹಾಸಿಗೆಗೆ ಹಾಕಲಾಗಿದ್ದ ಕಂಬಳಿ, ಏಪ್ರನ್‌ಗಳನ್ನು ಒಗೆದು ಒಣಗಿಸಿ ಹಾಕಲಾಗಿತ್ತು. ಆದರೆ ಈ ಕಂಬಳಿ, ಹೊದಿಕೆಗಳ ಮೇಲೆ ಪ್ರಾಣಿಗಳು ಓಡಾಡಿರುವ ಘಟನೆ ಧಾರವಾಡದಲ್ಲಿ ಜಿಲ್ಲಾ ಆಸ್ಪತ್ರೆಲ್ಲಿ ನಡೆದಿದೆ. ಅದಾಗ್ಯೂ ಅಧಿಕಾರಿಗಳ ನಿರ್ಲಕ್ಷ್ಯ ಅಂತಹ ಸ್ಥಳಗಳಲ್ಲಿ ಒಣಗಿಸಿದ ಬಟ್ಟೆಗಳನ್ನು ಸುಮಾರು 200 ರೋಗಿಗಳಿಗೆ ಧರಿಸಲು ನೀಡಲಾಗುತ್ತಿದೆ. ಇದರಿಂದ ರೋಗಿಗಳು ಯಾವುದೇ ತಪ್ಪಿಲ್ಲದೆ ಸೋಂಕುಗಳಿಗೆ ಒಳಗಾಗುತ್ತಾರೆ. ಆಸ್ಪತ್ರೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಿಬ್ಬಂದಿಯ ಮೇಲಿನ ಹಿಡಿತದ ಕೊರತೆಯನ್ನು ತೋರಿಸುತ್ತದೆ.

Also Read  ರಾಜ್ಯದಲ್ಲಿ 'ವಿವಾಹ ನೋಂದಣಿ' ಈಗ ಇನ್ನಷ್ಟು ಸುಲಭ

error: Content is protected !!
Scroll to Top