ಮುರುಡೇಶ್ವರ – ಬೆಂಗಳೂರು ರೈಲು ಸೇವೆ 5 ತಿಂಗಳು ವಿಸ್ತರಣೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.21. ಚಳಿಗಾಲದ ಅವಧಿಗಾಗಿ ಜನವರಿ ಮಾಸಾಂತ್ಯ ತನಕ ಆರಂಭಿಸಲಾದ ಮುರುಡೇಶ್ವರ- ಪಡೀಲ್​ ಬೈಪಾಸ್​- ಯಶವಂತಪುರ ಸಾಪ್ತಾಹಿಕ ಸ್ಪೆಷಲ್​ ಎಕ್ಸ್​ಪ್ರೆಸ್​ (06563/06564) ರೈಲನ್ನು ಕರಾವಳಿಯ ಜನರ ಬೇಡಿಕೆಯಂತೆ ಮೇ ತಿಂಗಳ ಕೊನೆಯವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.

ವಾರಕ್ಕೊಮ್ಮೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ತಲುಪುತ್ತಿದೆ. ಮುರ್ಡೇಶ್ವರದಿಂದ ಹೊರಟು ಮರುದಿನ ಮುಂಜಾನೆ 4ಕ್ಕೆ ಯಶವಂತಪುರ ತಲುಪುತ್ತಿದೆ. ವಾರಾಂತ್ಯ ಬೆಂಗಳೂರಿನಿಂದ ರಾತ್ರಿ ತಡವಾಗಿ ಹೊರಡುವ ಕಾರಣದಿಂದ ಬೆಂಗಳೂರಿನಲ್ಲಿ ಇರುವ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಕಡೆಯ ಕರಾವಳಿಯ ಹೋಟೆಲ್​ ಉದ್ಯಮಿಗಳು, ಕಾರ್ಮಿಕರು ದಿನದ ಕೆಲಸ ಮುಗಿಸಿ ಊರಿಗೆ ತೆರಳಲು ಹೆಚ್ಚು ಉಪಯುಕ್ತವಾಗಿತ್ತು. ಪ್ರತಿ ಪ್ರಯಾಣದಲ್ಲೂ ಈ ರೈಲು ಭರ್ತಿಯಾಗಿ ಟಿಕೆಟ್​ಗಳು ವೈಟಿಂಗ್​ ಲಿಸ್ಟ್​ನಲ್ಲಿ ಇರುತ್ತಿತ್ತು.

Also Read  ಸುರಕ್ಷಾದಲ್ಲಿ ದಂತ ವೈದ್ಯರ ದಿನಾಚರಣೆ ಸಂಭ್ರಮ

 

error: Content is protected !!
Scroll to Top