ಕಡಬದ ಹಿರಿಯ ಬಿಜೆಪಿ ಮುಖಂಡ ಮನವಳಿಕೆ ಉಮೇಶ್ ರೈ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಕಡಬದ ಹಿರಿಯ ಬಿಜೆಪಿ ಮುಖಂಡ ನೂಜಿಬಾಳ್ತಿಲ ಗ್ರಾಮದ ಪದಕ ನಿವಾಸಿ ಮನವಳಿಕೆ ಉಮೇಶ್ ರೈ(72) ಭಾನುವಾರ ರಾತ್ರಿ ವಿಧಿವಶರಾದರು.

ಮೂಲತ ಆಲಂಕಾರು ಮನವಳಿಕೆ ಗುತ್ತು ಮನೆತನದ ಉಮೇಶ್ ರೈ ಕಡಬ ಪರಿಸರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಜಿಲ್ಲಾ ಸ್ಕ್ಯಾಡ್ಸ್ ಅಧ್ಯಕ್ಷರಾಗಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಇವರು ಕೆಲದಿನಗಳ ಅಸೌಖ್ಯದಿಂದಾಗಿ ಭಾನುವಾರ ರಾತ್ರಿ ನೂಜಿಬಾಳ್ತಿಲ ಗ್ರಾಮದ ಪದಕದ ತನ್ನ ಮನೆಯಲ್ಲಿ ನಿಧನರಾದರು.

Also Read  ಚಲಿಸುತ್ತಿದ್ದ ಜೀಪ್‌ ಗೆ ಬೆಂಕಿ ಅವಘಡ

error: Content is protected !!
Scroll to Top