ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ ಬ್ರಿಟನ್​ ಪ್ರಧಾನಿ !! ➤  ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ)newskadaba.com  ಲಂಡನ್​, ಜ.21. ಸೀಟ್​ ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣ ಬೆಳೆಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಸಾಮಾಜಿಕ ಜಾಲತಾಣಕ್ಕಾಗಿ ವಿಡಿಯೋ ಮಾಡುವಾಗ ಸೀಟ್​ ಬೆಲ್ಟ್ ಧರಿಸದೇ​ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ರಿಷಿ ಪ್ರಯಾಣ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಬ್ರಿಟನ್​ ಪೊಲೀಸರು ದಂಡವನ್ನು ವಿಧಿಸಿದ್ದು, ಇದರಿಂದ ರಿಷಿ ಅವರು ಮುಜುಗರ ಅನುಭವಿಸಿದ್ದಾರೆ.

ಈ ಬಗ್ಗೆ ರಿಷಿ ಸುನಕ್​ ಪ್ರತಿಕ್ರಿಯೆ ನೀಡಿದ್ದು, ಇದೊಂದು ತಿಳುವಳಿಕೆಯ ಸಣ್ಣ ಪ್ರಮಾದ ಎಂದಿದ್ದಾರೆ. ಉತ್ತರ ಇಂಗ್ಲೆಂಡ್‌ನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಇದು ರಿಷಿ ಅವರು ಪಡೆದ ಎರಡನೇ ದಂಡವಾಗಿದೆ. ಕಳೆದ ವರ್ಷ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಮಂತ್ರಿ ಬೋರಿಸ್​ ಜಾನ್ಸನ್​ ಸೇರಿದಂತೆ ರಿಷಿ ಅವರಿಗೆ ದಂಡ ವಿಧಿಸಲಾಗಿತ್ತು.

Also Read  ಈ ಸಲದ ದೀಪಾವಳಿಗೆ ಪಟಾಕಿ ಅಂಗಡಿ ಮಾಡಬೇಕೆಂದಿರುವಿರಾ..? ➤ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆಗೆ ಅರ್ಜಿ ಆಹ್ವಾನ

 

 

error: Content is protected !!
Scroll to Top