ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ  ! ➤  ಪೈಲೆಟ್ ಲೈಸೆನ್ಸ್ 3 ತಿಂಗಳು ಅಮಾನತು

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.21. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಏರ್ ಇಂಡಿಯಾ ವಿಮಾನ ಸಂಸ್ಥೆಗೆ 30 ಲಕ್ಷ ರೂ. ದಂಡ ಹಾಗೂ ಪೈಲೆಟ್ ಲೈಸೆನ್ಸ್ 3 ತಿಂಗಳು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೀಡಾಗಿತ್ತು.

ಏರ್ ಇಂಡಿಯಾ ಈಗಾಗಲೇ ಶಂಕರ್ ಮಿಶ್ರಾಗೆ ವಿಮಾನ ಪ್ರಯಾಣದಿಂದ 4 ತಿಂಗಳು ನಿರ್ಬಂಧ ವಿಧಿಸಿದೆ. ಘಟನೆ ನಡೆದಾಗ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಹಾಗೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಸೇರಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಮೇಲೂ ದಂಡ ವಿಧಿಸಲಾಗಿದೆ. ಏರ್ ಇಂಡಿಯಾದ ಡೈರೆಕ್ಟರ್ ಫ್ಲೈಟ್ ಸರ್ವಿಸ್ ಮೇಲೂ 3 ಲಕ್ಷ ರೂ. ದಂಡ ವಿಧಿಸಲಾಗಿದೆ.

Also Read  ಸಿ.ಪಿ.ಐ.ಎಂ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬದಲ್ಲಿ ಚಾಲನೆ

 

error: Content is protected !!
Scroll to Top