ಕಾರ್ಕಳ: ಮಾನಸಿಕವಾಗಿ ನೊಂದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಾರ್ಕಳ, ಜ.21. ನೇಣುಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡ್ಲಿಯಲ್ಲಿ ನಡೆದಿದೆ.ಮಜಯ ಪೂಜಾರಿ (48) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.


ಅಂಗಡಿಗೆ ಹೋಗಿ ವಿಳ್ಯದೆಲೆ ಖರೀದಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಾಸ್ ಬರದೇ ಇದ್ದುದರಿಂದ ಮನೆಯವರು ಹುಡುಕಾಡಿದಾಗ ಬೆಳ್ಸಾರ್‌ ಬೆಟ್ಟು ನರ್ಸರಿ ಎಂಬಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಪರೀತ ಮದ್ಯ ಸೇವನೆಯ ಚಟವೊಂದಿದ್ದ ಅವರು ಕಳೆದು ಏಳು ತಿಂಗಳಿಂದ ಕುಡಿತದ ಚಟದಿಂದ ಮುಕ್ತರಾಗಿದ್ದರು. ಯಾವುದೋ ಘಟನೆಯಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಕೃತ್ಯಕ್ಕೆ ಮುಂದಾಗಿರಬೇಕೆಂದು ತಿಳಿದುಬಂದಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಧ್ಯರಾತ್ರಿಯಲ್ಲಿ ವಾಹನ ಚಲಾಯಿಸುವಾಗ ಭಯ ಹುಟ್ಟಿಸುತ್ತಾನೆ….ಈ ವ್ಯಕ್ತಿ!!!              

 

error: Content is protected !!
Scroll to Top