(ನ್ಯೂಸ್ ಕಡಬ)newskadaba.com ಉಡುಪಿ, ಜ. 21. ಮುಂದಿನ ಪೀಳಿಗೆಗೆ ಅಭಿವೃದ್ಧಿ ಹೊಂದಿದ ಉಡುಪಿ ಜಿಲ್ಲೆಯನ್ನು ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ದೂರದೃಷ್ಟಿಯ ಯೋಜನೆಗಳಿಂದ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಲ್ಪೆ ಬೀಚ್ ನಲ್ಲಿ , ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 25 ವರ್ಷದ ಹಿಂದಿನಿಂದ ಇಂದಿನವರೆಗೆ ಆದ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ದಿ ಬಗ್ಗೆ ನಡೆದ ದೂರದೃಷ್ಟಿ ಕಾರ್ಯಕ್ರಮ ದ ಉದ್ದೇಶದಂತೆ , ಮುಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಅಗಬೇಕು. ಪ್ರವಾಸ ಉದ್ಯಮ ಇನ್ನಷ್ಟು ಅಭಿವೃದ್ದಿಗೊಳ್ಳಲಿ ಎಂದರು.