ಪುತ್ತೂರು : ಹಣದ ವಿಚಾರದಲ್ಲಿ ಅಪಹರಣಗೈದು ಕೊಲೆ ಬೆದರಿಕೆ !

(ನ್ಯೂಸ್ ಕಡಬ)newskadaba.com ಪುತ್ತೂರು, ಜ.21. ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಆತನ ಸಹೋದರನಿಗೆ ಕೊಲೆ‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.

ಕೊಯಿಲ ನಿವಾಸಿ ನಿಝಾಮ್ ಅವರು ಹಲ್ಲೆ ಸಂತ್ರಸ್ತ. ಅವರನ್ನು ಮಂಗಳೂರಿನ ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿದೆ.  ಹಣ ಕೊಡದಿದ್ದರೆ ಶಾರೂಕ್ ನನ್ನು ಅಪಹರಿಸಿ ಕೊಲೆ ಮಾಡುವುದಾಗಿ ಹೇಳಿದ್ದಾರೆ ಎಂದು ನಿಝಾಮ್ ಹೇಳಿದ್ದಾರೆ.

Also Read  100 ಹೊಸ ಬಿಎಂಟಿಸಿ ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

 

 

error: Content is protected !!
Scroll to Top