800 ಮಂದಿ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ ಕಂಪನಿ !

(ನ್ಯೂಸ್ ಕಡಬ)newskadaba.com ನವದೆಹಲಿ, ಜ.21. ವಿಪ್ರೋ ಇದೀಗ ಸುಮಾರು 800 ಮಂದಿ ಹೊಸ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಆಂತರಿಕ ಪರೀಕ್ಷೆ ನಡೆಸಿ ಕಳಪೆ ಕಾರ್ಯಕ್ಷಮತೆಯ ಕಾರಣ ನೀಡಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ತಿಳಿದುಬಂದಿದೆ.

ಈ ಕುರಿತು ವಿಪ್ರೋ ಪ್ರತಿಕ್ರಿಯೆ ನೀಡಿದ್ದು, ನಾವು ಅತ್ಯುನ್ನತ ಗುಣಮಟ್ಟವನ್ನು ಬಯಸುತ್ತೇವೆ. ನಾವು ನಿಗದಿಪಡಿಸಿರುವ ಗುರಿಯ ಮಾನದಂಡಗಳಿಗೆ ಅನುಗುಣವಾಗಿ, ಪ್ರತಿಯೊಬ್ಬ ಹೊಸ ಉದ್ಯೋಗಿ ಕೂಡ ಅವರಿಗೆ ನೀಡಲಾದ ಕೆಲಸದ ಕ್ಷೇತ್ರದಲ್ಲಿ ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಸಂಸ್ಥೆಯ ವ್ಯವಹಾರ ಉದ್ದೇಶಗಳು ಮತ್ತು ನಮ್ಮ ಗ್ರಾಹಕರ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಪ್ರಕ್ರಿಯೆ ರೂಪಿಸಲಾಗಿದೆ. ತರಬೇತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿವೆ.

Also Read  ಪತ್ನಿಯನ್ನು ಕೊಂದು 400 ಕಿಲೋ ಮೀಟರ್ ದೂರದಲ್ಲಿ ಸುಟ್ಟು ಹಾಕಿದ ಪತಿ

ಇನ್ನು ವಜಾಗೊಂಡ ಉದ್ಯೋಗಿಗಳ ಟರ್ಮಿನೇಷನ್ ಪತ್ರದ ಪ್ರತಿ ಲಭ್ಯವಾಗಿದ್ದು, ಅದರಲ್ಲಿ, ‘ನಿಮ್ಮ ತರಬೇತಿಗಾಗಿ ವ್ಯಯಿಸಿದ 75,000 ರೂ. ಭರ್ತಿಗೆ ನೀವು ಹೊಣೆಗಾರರಾಗಿದ್ದೀರಿ. ಆದರೆ ಈ ಮೊತ್ತವನ್ನು ಮನ್ನಾ ಮಾಡಿದ್ದೇವೆ’ ಎಂದು ವಿಪ್ರೋ ಉಲ್ಲೇಖಿಸಿದೆ.

 

error: Content is protected !!
Scroll to Top