ಸುಸ್ಥಿತಿಗೆ ಬಂದ ಇ-ಪಾಸ್‌ಬುಕ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.21. ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಇ-ಪಾಸ್‌ಬುಕ್‌ ಸೇವೆಯು ಇದೀಗ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಸಂಘಟನೆಯು ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿದೆ.

ಕಳೆದ 10 ದಿನಗಳಿಂದ ಇ-ಪಾಸ್‌ಬುಕ್‌ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಟ್ವಿಟರ್‌ನಲ್ಲಿ ಇಪಿಎಫ್‌ಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಸಂಘಟನೆಯು ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ‘ಪಾಸ್‌ಬುಕ್‌ ತಾಂತ್ರಿಕ ಕಾರಣಗಳಿಂದಾಗಿ ಬಳಕೆಗೆ ಅಲಭ್ಯವಾಗಿತ್ತು. ಇದೀಗ ಸರಿಯಾಗಿ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದೆ.

Also Read  ಸುಬ್ರಹ್ಮಣ್ಯ: ಚಿರತೆ ದಾಳಿಗೆ ಸಾಕು ನಾಯಿ ಬಲಿ

 

 

error: Content is protected !!
Scroll to Top