ಮಂಗಳೂರು: ‘ಬಿಎಸ್ ಡಬ್ಲ್ಯೂಟಿ’ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ!! ➤  ಚಿತ್ರ ನಟ ಅರವಿಂದ್ ಬೋಳಾರ್ ಆಯ್ಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.20. ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ “BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಿತ್ರ ನಟ ಅರವಿಂದ್ ಬೋಳಾರ್ ರವರು ಆಯ್ಕೆಯಾಗಿದ್ದಾರೆ. ಅರವಿಂದ ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ, ಕೊಂಕಣಿ ಮಲೆಯಾಳಂ ಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯಾರಿ ಭಾಷಾ ಪಾತ್ರದಲ್ಲಿಯೂ ಸೈ ಎನಿಸಿಕೊಂಡವರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಎಂಬಲ್ಲಿ ತಂದೆ ಕೃಷ್ಣಪ್ಪ ಮತ್ತು ತಾಯಿ ಸುಂದರಿಯವರ ಮಗನಾಗಿ ಜನಿಸಿದ ಇವರು ತುಳು ನಾಟಕ ಕಲಾವಿದನಾಗಿ ಸಾಂಸ್ಕೃತಿಕ ರಂಗ ಪ್ರವೇಶಿಸಿದರು. ಹಾಗೂ ತುಳು ಚಲನಚಿತ್ರ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಾಮಿಕ್ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್‌ಗಳಿಂದ ಅವರು ಕರಾವಳಿ ನಾಟಕ ಉದ್ಯಮದಲ್ಲಿ ಮತ್ತು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಸಹಿಯನ್ನು ರಚಿಸಿಕೊಂಡಿರುವ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ “ಸಾಧನೆ ಶಾರದಾರ್” ಮತ್ತು “ತುಳುವ ಮಾಣಿಕ್ಯ” ಎಂಬ ಬಿರುದು ಗಳಿಸಿದ್ದಾರೆ ಅದಲ್ಲದೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ 500 ಕ್ಕೂ ಹೆಚ್ಚು ಗೌರವಗಳು ಸಂದಿವೆ.

Also Read  ಸುಸೈಡ್ ಪಾಯಿಂಟ್ ಖ್ಯಾತಿಯ ನೇತ್ರಾವತಿ ಸೇತುವೆಗೆ ಬಿತ್ತು ರಕ್ಷಣಾ ಬೇಲಿ

 

 

error: Content is protected !!
Scroll to Top