ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತ ವ್ಯಕ್ತಿ ನಾನಲ್ಲ !! ➤  ನ್ಯೂರಾನ್ ಚಿತ್ರದ ನಟ ‘ಯುವ’ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.20. ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯರ ನಕಲಿ‌ ಫೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮ ಹಣ‌ ಸಂಪಾದನೆ‌ ಪ್ರಕರಣದಲ್ಲಿ ಇತ್ತೀಚೆಗೆ ಸ್ಯಾಂಡಲ್​ವುಡ್​ ನಟರೊಬ್ಬರ ಹೆಸರು ಕೇಳಿಬಂದಿತ್ತು.  ಈ ಸಂಬಂಧ ನಟ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನನ್ನನ್ನೇ ಹೋಲುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌ ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು  ನ್ಯೂರಾನ್ ಚಿತ್ರದ ನಾಯಕ ನಟ ಯುವ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಆ್ಯಪ್​​ನಲ್ಲಿ ಯುವ ನಟ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದಡಿ ಅವರನ್ನು ಸುದ್ದುಗುಂಟೆಪಾಳ್ಯ‌ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು. ಈ ಸಂಬಂಧ ಅವರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

Also Read  KSRTC ಬಸ್ ಟಿಕೆಟ್ ದರ ಏರಿಕೆ ಸುಳಿವು- ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ನನ್ನ ಹಾಗೇ ಇರುವ ಮಂಜುನಾಥ್ ಅಲಿಯಾಸ್ ಸಂಜು ಎಂಬಾತನನ್ನ‌ು ವೇಶ್ಯಾವಾಟಿಕೆ ಆರೋಪದಡಿ ಬಂಧಿಸಿದ್ದಾರೆ. ಆದರೆ, ಮಾಧ್ಯಮಗಳಲ್ಲಿ‌ ನನ್ನ ಹೆಸರು ಪ್ರಸ್ತಾಪಿಸಲಾಗಿತ್ತು. ಈ ಸುದ್ದಿ ನೋಡಿದಾಕ್ಷಣ ನಾನೇ‌ ಆತಂಕಕ್ಕೆ‌ ಒಳಗಾದೆ. ಕೂಡಲೇ‌‌ ಸ್ನೇಹಿತರು, ಸಂಬಂಧಿಕರೆಲ್ಲರೂ ಫೋನ್ ಮಾಡಿ ವಿಚಾರಿಸಿದ್ದರು. ನಾನು ಮನೆಯಲ್ಲೇ‌ ಇದ್ದೇನೆ. ನನ್ನನ್ನು ಪೊಲೀಸರು ಬಂಧಿಸಿಲ್ಲ” ಎಂದು ಹೇಳಿದ್ದಾರೆ

 

error: Content is protected !!
Scroll to Top