(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಜ.20. ಮೊರದಾಬಾದ್ ನ ಕಾಲೇಜೊಂದರಲ್ಲಿ ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಬುರ್ಖಾ ಹಾಕಿಕೊಂಡು ಬಂದರೆ ಕಾಲೇಜ್ ಕ್ಯಾಂಪಸ್‌ಗೆ ಹೋಗಲು ಬಿಡುವುದಿಲ್ಲ, ಗೇಟ್‌ನಲ್ಲಿ ಬುರ್ಖಾವನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇನ್ನು ಕಾಲೇಜಿನಲ್ಲಿ ಡ್ರೆಸ್‌ಕೋಡ್ ಇದೆ. ಕಾಲೇಜಿನ ಯೂನಿಫಾರ್ಮ್ ಹಾಕೊಂಡು ಬಂದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು. ಈ ನಿಯಮವನ್ನು ಮೀರಿದರೆ ಒಳಗೆ ಪ್ರವೇಶವಿಲ್ಲ ಎಂದು ಕಾಲೇಜು ಪ್ರಾಧ್ಯಾಪಕ ಎಪಿ ಸಿಂಗ್ ಹೇಳಿದ್ದಾರೆ. ಕಾಲೇಜಿನ ನಿರ್ಧಾರದ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟಿಸಿ ನಿಲುವು ಬದಲಾಯಿಸುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸಮಾಜವಾದಿ ಪಕ್ಷ ಬೆಂಬಲ ಸೂಚಿಸಿದೆ.
Also Read ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ➤ 5 ಭಾಷೆಗಳಲ್ಲಿ 777 ಚಾರ್ಲಿ ಸಿನಿಮಾ ಟೀಸರ್ ರಿಲೀಸ್