(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 20. ಕೊಡಗು ಕೆಲಸಕ್ಕೆಂದು ಹೋಗಿ ಕುವೈತ್ ನಲ್ಲಿ ಸಿಲುಕಿ ಪರದಾಡುತ್ತಿರುವ ಕೊಡಗು ಮೂಲದ ಮಹಿಳೆಯ ನೆರವಿಗೆ ಕೊಡಗು ಜಿಲ್ಲಾಡಳಿತ ಬಂದಿದೆ. ಕುಶಾಲನಗರ ತಾಲೂಕು ನೆಲ್ಲಿಹುದಿಕೇರಿ ಸಮೀಪದ ಕರಡಿಗೋಡು ನಿವಾಸಿ ಪಾರ್ವತಿ(32) ಬಂಧಿಯಾದ ಮಹಿಳೆ ಏಜೆಂಟ್ ಮಾಡಿದ ವಂಚನೆಯಿಂದ ಪಾರ್ವತಿ ದೂರದ ಕುವೈತ್ ನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ವಿದೇಶಕ್ಕೆ ಕಳುಹಿಸಿದ ಏಜೆಂಟ್, ಇದೀಗ ಮಹಿಳೆಯನ್ನು ಅಡಕತ್ತರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಭಾರತದ ಏಜೆಂಟ್ ಮೂಲಕ ಕುವೈತ್ ನ ಶ್ರೀಲಂಕಾದ ಏಜೆಂಟ್ ಸಮೀರ್ ಎಂಬಾತನನ್ನು ಸಂಪರ್ಕಿಸಿ ಪಾರ್ವತಿ ಕೆಲಸಕ್ಕೆ ಸೇರಿದ್ದರು. ಆದರೆ ಪಾಸ್ ಪೋರ್ಟ್ ಹಾಗೂ ವಿಸಾ ಕಿತ್ತುಕೊಂಡು ಮನೆ ಮಾಲೀಕ ಏಜೆಂಟ್ ಪಡೆದಿರುವ ಮೂರು ಲಕ್ಷ ನೀಡಿದರೆ ಮಾತ್ರ ದಾಖಲೆ ನೀಡುವುದಾಗಿ ಹೇಳಿದ್ದಾರೆ. ಇದೀಗ ಮಹಿಳೆ ಕಂಗಲಾಗಿದ್ದು, ಅವರು ಅನುಭವಿಸಿದ ಹಿಂಸೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಪಾರ್ವತಿ ಸರಿಯಾಗಿ ಊಟ ನೀಡದೆ ಮನೆಯ ಮಾಲೀಕ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಾರೆ. ಇದೀಗ ಪಾರ್ವತಿಯ ಸಹಾಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.