ಗೃಹಲಕ್ಷ್ಮಿ ಯೋಜನೆಗಾಗಿ ಶೀಘ್ರವೇ ಮಹಿಳೆಯರ ನೋಂದಣಿ ಅಭಿಯಾನ ​! ➤  ಡಿ.ಕೆ ಶಿವಕುಮಾರ್

(ನ್ಯೂಸ್ ಕಡಬ)newskadaba.com  ದಾವಣಗೆರೆ, ಜ.20. ರಾಜ್ಯದ ಮಹಿಳೆಯರ ಕಲ್ಯಾಣಕ್ಕಾಗಿ  ತಮ್ಮ ಪಕ್ಷ ಘೋಷಿಸಿರುವ ‘ಗೃಹ ಜ್ಯೋತಿ ಯೋಜನೆ’ ಮತ್ತು ‘ಗೃಹ ಲಕ್ಷ್ಮಿ’ಗೆ ಕಾಂಗ್ರೆಸ್ ಬೃಹತ್ ನೋಂದಣಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಇದರಂತೆ ಪ್ರತಿ ಮಹಿಳೆಗೆ ಮಾಸಿಕ 2,000 ರೂಪಾಯಿ ನಗದು ಸಹಾಯವನ್ನು ನೀಡಲಾಗುತ್ತದೆ. ಇನ್ನು ಕೆಲವೇ ತಿಂಗಳುಗಳಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ‘ಗೃಹ ಜ್ಯೋತಿ ಯೋಜನೆ’ ಅಡಿಯಲ್ಲಿ 200 ಯೂನಿಟ್‌ಗಳ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ.

Also Read  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ➤ ಆರೋಪಿಯ ಬಂಧನ

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಮಾದರಿಯಲ್ಲೇ , ಕ್ಷದ ಕಾರ್ಯಕರ್ತರಿಂದಲೇ ನೋಂದಣಿ ಮಾಡಲಾಗುವುದು ಎಂದರು. ಈ ಯೋಜನೆಗಳ ಮೂಲಕ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 18,000 ಯೂನಿಟ್ ಉಚಿತ ವಿದ್ಯುತ್ (ತಿಂಗಳಿಗೆ 1,500 ರೂ. 200 ಯೂನಿಟ್) ಮತ್ತು 24,000 (ಪ್ರತಿ ತಿಂಗಳಿಗೆ 2,000 ರೂ.) ಆರ್ಥಿಕ ನೆರವು ನೀಡುತ್ತದೆ ಎಂದು ಅವರು ಹೇಳಿದರು.

 

error: Content is protected !!
Scroll to Top