ಶಬರಿಮಲೆ ಕಾಣಿಕೆ ಎಣಿಕೆಯಲ್ಲಿ ಲೋಪ ! ➤  ವರದಿಗೆ ಹೈಕೋರ್ಟ್ ಸೂಚನೆ

(ನ್ಯೂಸ್ ಕಡಬ)newskadaba.com ಕೊಚ್ಚಿ, ಜ.20. ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭಕ್ತರು ನೀಡಿರುವ ಕಾಣಿಕೆ ಮತ್ತು ಇತರೆ ದೇಣಿಗೆ ಪೊಟ್ಟಣ ಎಣಿಕೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಗುಪ್ತಚರ ವಿಭಾಗಕ್ಕೆ ಹೈಕೋರ್ಟ್‌ ಸೂಚಿಸಿದೆ. ಕಾಣಿಕೆಯನ್ನು ಎಣಿಸುವಲ್ಲಿ ಆದ ಲೋಪದ ಕಾರಣ, ಕಾಣಿಕೆ ಹಾಕಿದ ನೋಟುಗಳು ಬಳಸಲಾಗದ ಸ್ಥಿತಿ ತಲುಪಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಸೂಚನೆ ನೀಡಿದೆ.

2 ತಿಂಗಳ ಯಾತ್ರೆಯ ಅವಧಿಯಲ್ಲಿ ದೇಗುಲಕ್ಕೆ 310 ಕೋಟಿ ರು. ಆದಾಯ ಹರಿದು ಬಂದಿದೆ ಎಂದು ದೇವಸ್ವಂ ಮಂಡಳಿ ಹೇಳಿತ್ತು. ಜೊತೆಗೆ ಜಾಗದ ಕೊರತೆಯಿಂದಾಗಿ ಕಾಣಿಕೆ ಹಣವನ್ನು ಕೆಲವೊಂದು ಕೊಠಡಿಗಳಲ್ಲಿ ಹಾಕಿಡಲಾಗಿದೆ. ಅದರ ಪೂರ್ಣ ಎಣಿಕೆಗೆ ಇನ್ನೂ ಹಲವಾರು ದಿನ ಬೇಕಾಗಲಿದೆ ಎಂದು ಮಾಹಿತಿ ನೀಡಿತ್ತು.

Also Read  ಕಾಸರಗೋಡು: ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು

 

error: Content is protected !!
Scroll to Top