ವಿಜಯಪುರದಲ್ಲಿ ಅಟ್ಟಹಾಸ ಮೆರೆದ ಕಾಮುಕರು ! ➤  ಬಸ್ಸಿಗಾಗಿ ಕಾಯುತ್ತಿದ್ದ ನರ್ಸ್ ಮೇಲೆ ‘ಸಾಮೂಹಿಕ ಅತ್ಯಾಚಾರ’

(ನ್ಯೂಸ್ ಕಡಬ)newskadaba.com  ವಿಜಯಪುರ, ಜ.20. ಜಿಲ್ಲೆಯಲ್ಲಿ ಕಾಮುಕರು ಅಟ್ಟಹಾಸವನ್ನೇ ಮೆರೆದಿರುವಂತ ಘಟನೆ ನಡೆದಿದೆ. ತಡರಾತ್ರಿ ಬಸ್ಸಿಗಾಗಿ ಕಾಯುತ್ತಿದ್ದಂತ ನರ್ಸ್ ಮೇಲೆಯೇ ಮೂವರು ಕಾಮುಕರು ಅತ್ಯಾತಾರವೆಸಗಿರೋ ಘೋರ ಘಟನೆ ನಡೆದಿದೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ತೆರಳೋದಕ್ಕೆ ತಡರಾತ್ರಿ ನರ್ಸ್ ಒಬ್ಬರು ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಆಕೆಯ ಬಳಿಯಲ್ಲಿ ತೆರಳಿದಂತ ಮೂವರು, ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದ್ದಾರೆ.

ಈ ವೇಳೆ ತಾನು ಇಂಡಿಗೆ ಹೋಗಬೇಕು ಎಂದು ತಿಳಿಸಿದಾಗ, ಇಲ್ಲಿ ಬಸ್ ಬರೋದಿಲ್ಲ, ಸೆಟಲೈಟ್ ಬಸ್ ನಿಲ್ದಾಣದಲ್ಲಿ ಬರುತ್ತೆ. ಅಲ್ಲಿಗೆ ಬಿಡುತ್ತೇವೆ ಬಾ ತಂಗಿ ಎಂಬುದಾಗಿ ಪುಸಲಾಯಿಸಿದ್ದಾರೆ. ಇವರ ಮಾತನ್ನು ನಂಬಿದಂತ ಆಕೆ, ಅವರೊಂದಿಗೆ ಬೈಕ್ ನಲ್ಲಿ ತೆರಳಿದ್ದಾಳೆ. ಬೈಕ್ ಹತ್ತಿಸಿಕೊಂಡು ಸೆಟಲೈಟ್ ಬಸ್ ನಿಲ್ದಾಣದ ಪಕ್ಕದಲ್ಲಿನ ತರಕಾರಿ ಮಾರುಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಆ ಬಳಿಕ ಆಕೆಯ ಬಟ್ಟೆ ಬಿಚ್ಚಲು ಹೇಳಿದ್ದಾರೆ. ನರ್ಸ್ ವಿರೋಧ ವ್ಯಕ್ತ ಪಡಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಳಿಕ ಒಬ್ಬಾತ ಆಕೆಯ ಮೇಲೆ ಅತ್ಯಾಚಾರ ಗೈದರೇ, ಮತ್ತಿಬ್ಬರು ಆತನಿಗೆ ಸಹಕಿರಿಸಿದ್ದಾರೆ.

Also Read  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ

ಈ ಸಂಬಂಧ ಸಂತ್ರಸ್ತ ನರ್ಸ್ ದೂರು ನೀಡಿದ್ದು, ದೂರಿನಲ್ಲಿ ಆ ಘಟನೆಯಿಂದ ತಾನು ಮೂರ್ಛೆ ಬಿದ್ದು ಹೋಗಿದ್ದು, ಜನರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Also Read  HMT ಕಾರ್ಖಾನೆ ಪುನಶ್ಚೇತನ: ನಿವೃತ್ತ ಕಾರ್ಮಿಕರಿಗೆ 361 ಕೋಟಿ ವೇತನ ಬಾಕಿ ಪಾವತಿಗೆ ಕ್ರಮ: HDK

 

error: Content is protected !!
Scroll to Top