(ನ್ಯೂಸ್ ಕಡಬ)newskadaba.com ಗಜಯಾಬಾದ್, ಜ.20. ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಚಪಾತಿಗೆಂದು ಕಲಸಿಟ್ಟ ಹಿಟ್ಟಿಗೆ ಉಗುಳಿ ಚಪಾತಿ ಮಾಡುತ್ತಿದ್ದ ಅಡುಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕಿಶನ್ ಗಂಜ್ ಬಿಹಾರದ ನಾಸಿರುದ್ದೀನ್ ಬಂಧಿತ ಆರೋಪಿ. ಮೋಹನ್ ನಗರ ವಜೀರಾಬಾದ್ (ದೆಹಲಿ) ರಸ್ತೆಯಲ್ಲಿರುವ ಪಸೋಂಡಾ ಗ್ರಾಮದಲ್ಲಿ ರಸ್ತೆ ಬದಿಯಲ್ಲಿರುವ ಉಪಾಹಾರ ಗೃಹದಲ್ಲಿ ಈತ ಅಡುಗೆ ಸಿಬಂದಿಯಾಗಿದ್ದ. ಇಲ್ಲಿ ಚಪಾತಿ ಮಾಡಲೆಂದು ಕಲಸಿಟ್ಟ ಹಿಟ್ಟಿಗೆ ಈತ ಉಗುಳಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಸಾಹಿಬಾಬಾದ್ ವೃತ್ತದ ಸಹಾಯಕ ಪೊಲೀಸ್ ಆಯುಕ್ತ ಪೂನಂ ಮಿಶ್ರಾ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ 269 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.