ಬಂಟ್ವಾಳ: ಅಪರಿಚಿತ ಕಾರು ಪತ್ತೆ ! ➤ ಸ್ಯಾಂಟ್ರೋ ರವಿಯ ಕಾರು ಎಂಬ ಶಂಕೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜ.20. ಕಳೆದ ಕೆಲವು ದಿನಗಳಿಂದ ಇನೋವಾ ಕಾರೊಂದು ವಾರಿಸುದಾರರಿಲ್ಲದೆ ಬಿ.ಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿತ್ತು, ಇದು ಸಾರ್ವಜನಿಕರಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಬಿ.ಸಿರೋಡಿನ ಫ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿತ್ತು. ಜನರು ಇದು ಸ್ಯಾಂಟ್ರೊ ರವಿಯ ಕಾರು ಎಂದು ಹೇಳಿಕೊಳ್ಳುತ್ತಿದ್ದರು.


ಆದರೆ ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ಈ ಕಾರಿನ ದಾಖಲೆ ಇದೆ ಎಂದು ವರದಿ ತಿಳಿಸಿದೆ. ಇನ್ನು ಈ ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ನಲ್ಲಿದೆ ಎನ್ನಲಾಗಿದೆ. ಕಾರಿನ ಒಳ ಭಾಗದಲ್ಲಿ ಚೀಟಿ ಸಿಕ್ಕಿದೆ. ಅದರಲ್ಲಿ ಸಮೀರ್ ಎಂಬ ಹೆಸರಿನ ಮುಂದೆ ಫೋನ್ ನಂಬರ್ ಬರೆದಿದ್ದು, ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆಯಲಾಗಿತ್ತು.

Also Read  ಪುತ್ತೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪ್ರಭಾರ ಮುಖ್ಯ ಶಿಕ್ಷಕ ಬಂಧನ

error: Content is protected !!
Scroll to Top