ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ➤ ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ನೇಮಕಾತಿ

(ನ್ಯೂಸ್ ಕಡಬ)newskadaba.com ಜ.20. 10ನೇ ತರಗತಿ ಓದಿದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ ತನ್ನ ಅಧಿಕೃತ ವೆಬ್ ಪೋರ್ಟಲ್ ಈ ಘೋಷಣೆ ಮಾಡಿದ್ದು, ಒಟ್ಟು 98083 ಪೋಸ್ಟ್ ಮ್ಯಾನ್ 59099 ಮತ್ತು ಮೇಲ್ ಗಾರ್ಡ್ 1445 ಹುದ್ದೆಗಳು ಖಾಲಿ ಇವೆ. ಇನ್ನು ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ 23 ವಲಯಗಳಲ್ಲಿ ಒಟ್ಟು 37539 ಹುದ್ದೆಗಳು ಖಾಲಿ ಇವೆ.

Also Read  ರೈಲ್ವೇ ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..!

ಅರ್ಹತೆ : ಅಧಿಕೃತ ಇಂಡಿಯಾ ಪೋಸ್ಟ್ ಆಫೀಸ್ ಅಧಿಸೂಚನೆ 2023ರ ಪ್ರಕಾರ, 10ನೇ ತರಗತಿ, 12ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳನ್ನ ಹುದ್ದೆಗೆ ಆಯ್ಕೆ ಮಾಡಲಾಗುತ್ತೆ. ಅದ್ರಂತೆ, ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದ ಇತರ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನ ಪರಿಶೀಲಿಸಿ.

 

error: Content is protected !!
Scroll to Top