ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!! 

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, ಜ.20. ಮಗ ಕೆಟ್ಟವನಾದರೂ ತಾಯಿ ಕೆಟ್ಟವಳಾಗುವುದಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿ ಮಾತ್ರ ತಾಯಿ, ತನ್ನ ಮಗುವಿಗೆ ಜನ್ಮ ನೀಡಿ ಮಗು ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಅದರ ಪರಿಣಾಮವಾಗಿ ಈಗ ಮಗು ಮೃತಪಟ್ಟಿದೆ.

ನಡುರಸ್ತೆಯಲ್ಲೇ ಪುಟ್ಬಾತ್ ಮೇಲೆ ಮಗುವಿಗೆ ಹೆಣ್ಣು ಜನ್ಮ ನೀಡಿದ ತಾಯಿ ನಂತರ ಆಕೆ ನಾಪತ್ತೆಯಾಗಿದ್ದಾಳೆ. ಈ ರೀತಿಯ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಹುಟ್ಟಿಸಿದ ಮಗು ತನಗೆ ಬೇಡ ಎಂದು ಅನೇಕ ತಾಯಂದಿರು ಮಗುವನ್ನು ತ್ಯಜಿಸುವುದು ಈಗ ಸಾಮಾನ್ಯವಾಗಿದೆ.

ಸರಿಯಾದ ಆರೈಕೆ ಸಿಗದೇ, ತಾಯಿಯ ಆಸರೆಯೂ ಇರದೇ ನವಜಾತ ಶಿಶು ಪುಟ್ಬಾತ್ ಮೇಲೆಯೇ ಪ್ರಾಣ ಬಿಟ್ಟಿರುವ ಮನಕಲುಕುವ ಘಟನೆ ಗುಡಿಬಂಡೆ ಪಟ್ಟಣದ ರಾಮಪಟ್ಟಣ ವೃತ್ತದಲ್ಲಿ ನಡೆದಿದೆ. ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದು ಮಗುವಿನ ಮೃತದೇಹವನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ‌ ಮಾಡಲಾಗಿದೆ.

Also Read  ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು

 

error: Content is protected !!
Scroll to Top