‘SBI’ ಗ್ರಾಹಕರಿಗೆ ಬಿಗ್ ಶಾಕ್..!! ➤ ಖಾತೆಯಿಂದ ‘ಹಣ’ ಕಟ್…

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.20. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ್ದು, ಯಾವುದೇ ಕಾರಣ ನೀಡದೇ ಖಾತೆಯಿಂದ ಹಣ ಕಡಿತಗೊಳಿಸಲಾಗುತ್ತಿದೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಹಲವು ಗ್ರಾಹಕರಿಗೆ ತಮ್ಮ ಖಾತೆಯಿಂದ 147.50 ರೂಪಾಯಿ ಕಡಿತವಾಗಿದೆ ಎಂಬ ಸಂದೇಶ ಬರುತ್ತಿದೆ. ಈ ಸಂದೇಶವನ್ನ ನೋಡಿದ ಹಲವು ಗ್ರಾಹಕರು ಬ್ಯಾಂಕ್ ಗೆ ತೆರಳಿ ವಿಚಾರಿಸಿದ್ದಾರೆ.


ಈ ಹಣವನ್ನ ಗ್ರಾಹಕರ ಖಾತೆಯಿಂದ ನಿರ್ವಹಣೆ ಶುಲ್ಕವಾಗಿ ಕಡಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. 18 ರಷ್ಟು ಜಿಎಸ್ಟಿ ಶುಲ್ಕವಾಗಿ ಈ ಹಣವನ್ನ ಬ್ಯಾಂಕ್ ನಿಂದ ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ವಿತರಿಸಿದ ಡೆಬಿಟ್ ಕಾರ್ಡ್ ಆಗಿ ಬ್ಯಾಂಕ್ ಗ್ರಾಹಕರಿಂದ ವರ್ಷಕ್ಕೆ ರೂ.125 ವಸೂಲಿ ಮಾಡುತ್ತಿದೆ. ಇದಕ್ಕೆ ಶೇ.18ರಷ್ಟು ಜಿಎಸ್ ಟಿ ಸೇರಿಸಿದರೆ ಈ ಮೊತ್ತ 147.50 ರೂ. ಈ ಒಟ್ಟು ಮೊತ್ತವನ್ನ ಗ್ರಾಹಕರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಲ್ಲದೇ, ಯಾವುದೇ ಖಾತೆದಾರರು ಡೆಬಿಟ್ ಕಾರ್ಡ್ ಬದಲಾಯಿಸಲು ಬಯಸಿದರೆ, ಅವರು ಬ್ಯಾಂಕ್ಗೆ 300 ರೂಪಾಯಿ ಮತ್ತು ಜಿಎಸ್ಟಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ.

Also Read  ಏರ್ ಲಿಫ್ಟ್ ಮೂಲಕ ಕತಾರ್ ನಿಂದ ಮಂಗಳೂರಿಗೆ ಬಂದಿಳಿದ 185 ಕನ್ನಡಿಗರು

error: Content is protected !!
Scroll to Top