ಬಂಟ್ವಾಳದಲ್ಲೊಂದು ವಾರಸುದಾರರಿಲ್ಲದ ಅನುಮಾನಸ್ಪದ ಕಾರು ಪತ್ತೆ ➤ಸ್ಯಾಂಟ್ರೋ ರವಿ ಕಾರು ಶಂಕೆ!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.19. ಕಳೆದ ಕೆಲವು ದಿನಗಳಿಂದ ಟೊಯೋಟಾ ಇನೋವಾ ಕಾರೊಂದು ವಾರಿಸುದಾರರಿಲ್ಲದೆ ಬಿಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಊಹಾಪೋಹಗಳು ಕೇಳಿ ಬಂದಿದೆ.

ಬಿಸಿರೋಡಿನ ಭಾರತ್ ಸ್ಟೋರ್ ಮುಂಭಾಗದಲ್ಲಿ ಫ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚಿಗೆ ಬಾರೀ ಸುದ್ಧಿಯಾಗಿದ್ದ ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ.

ಅಸಲಿಗೆ ಇದು ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ಈ ಕಾರಿನ ದಾಖಲೆ ತೋರಿಸುತ್ತಿದೆ. ಕೆ.ಎಲ್.14 ವೈ.8999 ನಂ.ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿದೆ. ಇಲಾಖೆ ಕೆಲವೊಂದು ಕಾರಣಗಳನ್ನು ನೀಡಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ ದಾಖಲೆ ತೋರಿಸುತ್ತಿದೆ.

Also Read  ಬಿದ್ದು ಸಿಕ್ಕಿದ ಚಿನ್ನವನ್ನು ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಭಾಕರ್

ನಿಲ್ಲಿಸಲಾಗಿದ್ದ ಕಾರಿನ ಒಳ ಭಾಗದಲ್ಲಿ ಚೀಟಿ ಒಂದನ್ನು ಇಟ್ಟಿದ್ದು, ಸಮೀರ್ ಎಂಬ ಹೆಸರಿನ ಮುಂದೆ 9995333448 ಎಂದು ಬರೆಯಲಾಗಿದೆ. ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆದಿದ್ದಾರೆ.

ಸ್ಥಳೀಯ ಅಂಗಡಿ ಮಾಲಕರಿಗೆ ಈ ಕಾರಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿದ್ದು, ಸ್ಯಾಂಟ್ರೋ ರವಿ ಇಲ್ಲಿ ಕಾರು ಇಟ್ಟು ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ

error: Content is protected !!
Scroll to Top