ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ..!

(ನ್ಯೂಸ್ ಕಡಬ) newskadaba.com ವೆಲ್ಲಿಂಗ್ಟನ್‌, . 19. ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಿಸಿದ್ದು, ಪ್ರಧಾನಿ ಸ್ಥಾನದಲ್ಲಿ ಉಳಿಯಲು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇದರ ಹಿಂದೆ ಯಾವುದೇ ರಹಸ್ಯವಿಲ್ಲ. ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ. ಇದೊಂದು ಅತ್ಯಂತ ಹೆಚ್ಚಿನ ಜವಾಬ್ದಾರಿಯುತ ಹುದ್ದೆ, ಅದನ್ನು ನಿರ್ವಹಿಸುವುದು ಕೂಡಾ ಸುಲಭವಲ್ಲ. ಮತ್ತೆ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಜಸಿಂಡಾ ಅವರು ದಿಢೀರ್ ನಿರ್ಧಾರ ಪ್ರಕಟಿಸಿದ್ದು, ಪಕ್ಷದಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಕ್ಟೋಬರ್ 14 ರ ಶನಿವಾರದಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಮತ್ತು ಅಲ್ಲಿಯವರೆಗೆ ಅವರು ಚುನಾವಣಾ ಸಂಸದರಾಗಿ ಮುಂದುವರಿಯುತ್ತಾರೆ. ತನ್ನ ರಾಜೀನಾಮೆ ಫೆಬ್ರವರಿ 7 ರ ನಂತರ ಜಾರಿಗೆ ಬರಲಿದೆ. ನಾವು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಹೊರನಡೆಯುತ್ತಿಲ್ಲ. ಆದರೆ, ನಾವು ಗೆಲ್ಲಬಹುದು ಮತ್ತು ಗೆಲ್ಲುತ್ತೇವೆ ಎಂದು ನಾನು ನಂಬುತ್ತೇನೆ” ಎಂದೂ ನ್ಯೂಜಿಲೆಂಡ್‌ ಪ್ರಧಾನಿ ಹೇಳಿದ್ದಾರೆ.

Also Read  ಕಡಬದಲ್ಲಿ ಮತ್ತೆ ಕೊರೋನಾ‼️ ➤ ಬಲ್ಯದ ನರ್ಸ್ ಗೆ ಪಾಸಿಟಿವ್

error: Content is protected !!
Scroll to Top