➤ಪ್ರಧಾನಿ ಮೋದಿಯವರಿಂದ ಯಾದಗಿರಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ

ನ್ಯೂಸ್ ಕಡಬ) newskadaba.com. ಯಾದಗಿರಿ, ಜ.19. ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ಕೊಡೆಕಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಯಾದಗಿರಿ ಜಿಲ್ಲೆಯ ಕೊಡೆಕಲ್ ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ಯಾದಗಿರಿ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Also Read  5 ಗಂಟೆಗೆ ರಾಜ್ಯವನ್ನು ಉದ್ದೇಶಿಸಿ ಸಿಎಂ ಬಿಎಸ್ ವೈ ಭಾಷಣ

ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ, ಯಾದಗರಿ, ರಾಯಚೂರು ಹಾಗೂ ಮುಂಬೈ ಕರ್ನಾಟಕದ ವಿಜಯಪುರ ಜಿಲ್ಲೆಗಳ 52,072 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲು ತೆರಳಲಿದ್ದಾರೆ.

error: Content is protected !!
Scroll to Top