ಜಿಮ್‌ ಸೆಂಟರ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು..!

ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ,ಜ.19. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಪಟ್ಟಣದ 67 ವರ್ಷದ ವ್ಯಕ್ತಿಯೊಬ್ಬರು ಜಿಮ್‌ ಸೆಂಟರ್​​ನಲ್ಲಿ  ವ್ಯಾಯಾಮ ಮಾಡುವಾಗ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಪ್ರಲ್ಹಾದ್ ನಿಕಮ್ ಎಂದು ಗುರುತಿಸಲಾಗಿದೆ. ಪ್ರಲ್ಹಾದ್ ನಿಕಮ್ ಅವರು  ನಿನ್ನೆ ರಾತ್ರಿ 7.30 ರ ಸುಮಾರಿಗೆ ಜಿಮ್‌ ಸೆಂಟರ್​ನಲ್ಲಿ ತಮ್ಮ ಪ್ರತಿದಿನದ ವ್ಯಾಯಾಮವನ್ನು ಮಾಡುತ್ತಿದ್ದಾಗ ತಲೆತಿರುಗಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಮಹಾರಾಷ್ಟ್ರದ ವ್ಯಕ್ತಿಯಾದ  ಇವರು ಜಿಮ್‌ ಸೆಂಟರ್​ನಲ್ಲಿ ವ್ಯಾಯಾಮ ಮಾಡುವ ಸಮಯದಲ್ಲಿ ಕುಸಿದು ಬಿದ್ದಿದ್ದಾರೆ, ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ವೈದ್ಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ  ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Also Read  ಇನ್ನು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಏಕಾಂಗಿ ಹೋರಾಟನಡೆಸಲಿದೆ ಬಿಎಸ್ಪಿ ➤ ಬಿಎಸ್ಪಿ ಅಧಿನಾಯಕಿ ಮಾಯಾವತಿ

error: Content is protected !!
Scroll to Top